Home ಗಲ್ಫ್ ಫಿಫಾ ವಿಶ್ವಕಪ್’ನಲ್ಲಿ ಬೆಲ್ಜಿಯಂ ವಿರುದ್ಧ ಮೊರಾಕೊ’ಗೆ ಜಯ: ಬ್ರುಸೆಲ್ಸ್’ನಲ್ಲಿ ಹಿಂಸಾಚಾರ

ಫಿಫಾ ವಿಶ್ವಕಪ್’ನಲ್ಲಿ ಬೆಲ್ಜಿಯಂ ವಿರುದ್ಧ ಮೊರಾಕೊ’ಗೆ ಜಯ: ಬ್ರುಸೆಲ್ಸ್’ನಲ್ಲಿ ಹಿಂಸಾಚಾರ

ಕತಾರ್: ಫಿಫಾ ವಿಶ್ವಕಪ್ ಪಂದ್ಯದಲ್ಲಿ ಮೊರಾಕೊ ಬೆಲ್ಜಿಯಂ ವಿರುದ್ಧ 2:1 ಗೋಲುಗಳಿಂದ ಜಯಗಳಿಸಿದ ಬಳಿಕ ಬೆಲ್ಜಿಯಂ ಬೆಂಬಲಿಗರು ಅಸಮಾಧಾನಗೊಂಡ ಹಿನ್ನೆಲೆಯಲ್ಲಿ ಬೆಲ್ಜಿಯಂನ ರಾಜ್ಯಧಾನಿ ಬ್ರುಸೆಲ್ಸ್ ಮತ್ತು ಹಲವಾರು ನಗರಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ನೆರಯ ನೆದರ್’ಲ್ಯಾಂಡ್’ನಲ್ಲಿಯೂ ಆಶಾಂತಿ ಉಂಟಾಗಿದೆ ಎಂದು ತಿಳಿದುಬಂದಿದೆ.

ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್’ನಲ್ಲಿ ಮೊರಾಕೊ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ.

ಬ್ರುಸೆಲ್ಸ್’ನಲ್ಲಿ ಆಕ್ರೋಶಿತ ಜನರು ಹಿಂಸಾಚಾರ ನಡೆಸುವುದು ಮತ್ತು ಕಾರನ್ನು ಸುಟ್ಟು ಹಾಕುತ್ತಿರುವ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ಘಟನೆಯನ್ನು ಬ್ರುಸೆಲ್ಸ್ ಮೇಯರ್ ಫಿಲಿಪ್ ಕ್ಲೋಸ್ ಬಲವಾಗಿ ಖಂಡಿಸಿದ್ದು, ನಗರದಿಂದ ದೂರ ಉಳಿಯುವಂತೆ ಅಭಿಮಾನಿಗಳಿಗೆ ಸೂಚಿಸಿದ್ದಾರೆ. ಸ್ಥಳದಲ್ಲಿ ಶಾಂತಿಯನ್ನು ಕಾಪಾಡಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಪೊಲೀಸರು ನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

Join Whatsapp
Exit mobile version