Home ಟಾಪ್ ಸುದ್ದಿಗಳು ರಿಹನ್ನಾಳ ‘ದಿ ಕಮ್ಯುನಿಸ್ಟ್ ಮ್ಯಾನಿಫೆಸ್ಟೊ’ ವೈರಲ್ ಚಿತ್ರದ ಅಸಲಿಯತ್ತೇನು?

ರಿಹನ್ನಾಳ ‘ದಿ ಕಮ್ಯುನಿಸ್ಟ್ ಮ್ಯಾನಿಫೆಸ್ಟೊ’ ವೈರಲ್ ಚಿತ್ರದ ಅಸಲಿಯತ್ತೇನು?

ರೈತರ ಹೋರಾಟವನ್ನು ಬೆಂಬಲಿಸಿ ಟ್ವೀಟ್ ಮಾಡಿದ ನಂತರ ಅಮೇರಿಕಾದ ಪಾಪ್ ಗಾಯಕಿ ರಿಹಾನ್ನಾ ಬಗ್ಗೆ ಭಾರತದಲ್ಲಿ ಸಾಮಾನ್ಯ ಜನರೂ ಚರ್ಚೆ ನಡೆಸುತ್ತಿದ್ದಾರೆ. ದೆಹಲಿ ಗಡಿಯಲ್ಲಿ ಇಂಟರ್ನೆಟ್ ಸಂಪರ್ಕ ಕಡಿತವನ್ನು ಪ್ರಶ್ನಿಸಿ ‘ಯಾರೂ ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ?’ ಎಂದು ಗಾಯಕಿ ಟ್ವೀಟ್ ಮಾಡಿದ್ದರು. ಸಿಎನ್ಎನ್ ಪ್ರಸಾರ ಮಾಡಿದ್ದ ಸುದ್ದಿಯನ್ನು ರೀಟ್ವೀಟ್ ಮಾಡುವ ಮೂಲಕ ರಿಹಾನ್ನಾ ಈ ಪ್ರಶ್ನೆಯನ್ನು ಕೇಳಿದ್ದರು.

ನಂತರ ರಿಹಾನ್ನಾ ಅವರನ್ನು ಬೆಂಬಲಿಸಿ ಮತ್ತು ವಿರೋಧಿಸಿ ಅನೇಕರು ಟ್ವೀಟ್ ಮಾಡಿದ್ದರು. ಅದೇ ವೇಳೆ ರಿಹಾನ್ನಾ ಕಮ್ಯುನಿಸ್ಟ್ ಪರ ಹಿನ್ನೆಲೆಗೆ ಈ ಚಿತ್ರ ಸಾಕ್ಷಿಯಾಗಿದೆ ಹಲವರು ಪೋಸ್ಟ್ ಮಾಡಿದ್ದಾರೆ.

ಇದು ನಿಜಕ್ಕೂ ರಿಹಾನ್ನಾ ಅವರ ಆತ್ಮಚರಿತ್ರೆಯ ಮುಖಪುಟವನ್ನು ಹಿಡಿದ ಫೋಟೋಶೂಟ್ ಆಗಿದೆ. ಈ ಚಿತ್ರಗಳನ್ನು ಫ್ಯಾಷನ್ ನಿಯತಕಾಲಿಕ ‘ವೋಗ್’ ಪ್ರಕಟಿಸಿತ್ತು. ಇದನ್ನು ಫೋಟೋಶೋಪ್‌ನಲ್ಲಿ ಎಡಿಟ್ ಮಾಡಿ ‘ದಿ ಕಮ್ಯೂನಿಸ್ಟ್ ಮಾನಿಫೆಸ್ಟೋ’ ಎಂದು ಬರೆಯಲಾಗಿತ್ತು.

ಇದಾಗಿದೆ ನೈಜ ಚಿತ್ರ….

ಐನೂರು ಪುಟಗಳಷ್ಟಿರುವ ರಿಹಾನ್ನಾ ಅವರ ಆತ್ಮಚರಿತ್ರೆ ಇದಾಗಿದೆ. ಇದು ಬಾಲ್ಯ ಸೇರಿದಂತೆ ಸಾವಿರಕ್ಕೂ ಹೆಚ್ಚು ಫೊಟೋಗಳನ್ನು ಹೊಂದಿರುವ ವಿಶ್ಯುವಲ್ ಆಟೋಬಯೋಗ್ರಫಿಯಾಗಿದೆ. ಪ್ರಸಿದ್ಧ ಪ್ರಕಾಶನ ಕಂಪನಿಯಾದ ಫಿಡೆನ್ ಪ್ರೆಸ್ ಸಹಯೋಗದೊಂದಿಗೆ ಆತ್ಮಚರಿತ್ರೆಯನ್ನು ಪ್ರಕಟಿಸಲಾಗಿದೆ. ಅಮೆಜಾನ್ ಇಂಡಿಯಾದಲ್ಲಿ ಈ ಪುಸ್ತಕ 10,190 ರೂ. ಗೆ ಲಭ್ಯವಿದೆ.

Join Whatsapp
Exit mobile version