Home Uncategorized ಕ್ಯಾಪಿಟೊಲ್ ಕಟ್ಟಡಕ್ಕೆ ದಾಳಿ: ಭಾರತೀಯ ಧ್ವಜ ಹಿಡಿದ ವ್ಯಕ್ತಿ ಬಲಪಂಥೀಯ ಹಿಂದೂ ಸಂಘಟನೆ ಸದಸ್ಯ

ಕ್ಯಾಪಿಟೊಲ್ ಕಟ್ಟಡಕ್ಕೆ ದಾಳಿ: ಭಾರತೀಯ ಧ್ವಜ ಹಿಡಿದ ವ್ಯಕ್ತಿ ಬಲಪಂಥೀಯ ಹಿಂದೂ ಸಂಘಟನೆ ಸದಸ್ಯ

ವಾಶಿಂಗ್ಟನ್: ನಿನ್ನೆ ಅಮೆರಿಕಾದ ಕ್ಯಾಪಿಟೊಲ್ ಹಿಲ್ ಕಟ್ಟಡಕ್ಕೆ ನುಗ್ಗಿದ ಟ್ರಂಪ್ ಪರ ಪ್ರತಿಭಟನಕಾರರಲ್ಲಿ ಭಾರತೀಯ ಧ್ವಜ ಹಿಡಿದ ವ್ಯಕ್ತಿ ಕೃಷ್ಣ ಗುಡಿಪಟಿ ಎಂಬ ಭಾರತೀಯ ಎಂಬುದಾಗಿ ‘ಡ್ರಂಕ್ ಜರ್ನಲಿಸ್ಟ್’ ಫ್ಯಾಕ್ಟ್ ಚೆಕರ್ ಟ್ವಿಟ್ಟರ್ ಖಾತೆ ಪೋಸ್ಟ್ ಮಾಡಿದೆ.

ಇದೇ ವ್ಯಕ್ತಿ ಕೆಂಪು ಜಾಕೆಟ್ ತೊಟ್ಟು ಭಾರತೀಯ ಧ್ವಜ ಹಿಡಿದು ಕ್ಯಾಪಿಟೊಲ್ ಹಿಲ್ ಕಟ್ಟಡದ ಮುಂದೆ ಪ್ರತಿಭಟನೆ ನಡೆಸುತ್ತಿರುವ ಫೋಟೊವನ್ನೂ ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ‘ಹೌಡಿ ಮೋದಿ’ ಕಾರ್ಯಕ್ರಮದ ವೇಳೆ ಎ.ಎನ್.ಐ ವರದಿಗಾರ್ತಿಯೊಂದಿಗೆ ಈತ ಸಂಸ್ಕೃತ ಭಾಷೆಯಲ್ಲಿ ಮಾತನಾಡುವ ವೀಡಿಯೊ ಕೂಡ ವೈರಲ್ ಆಗಿದೆ.

ಈತ ಬಲಪಂಥೀಯ ಹಿಂದೂ ಸಂಘಟನೆಯಾದ ವಿರಾಟ್ ಹಿಂದುಸ್ತಾನ್ ಸಂಗಮ್ (ವಿ.ಎಚ್.ಎಸ್) ಸಂಘಟನೆಗೆ ಸೇರಿದವನಾಗಿದ್ದು, ಸಂಸದ ಸುಬ್ರಹ್ಮಣ್ಯಮ್ ಸ್ವಾಮಿಯೊಂದಿಗಿದ್ದ ಚಿತ್ರವೂ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ಕೃಷ್ಣ ಗುಡಿಪಟಿ ವಿ.ಎಚ್.ಎಸ್ ಸಂಘಟನೆಗೆ ಸೇರಿದವನೆಂದು ಫ್ಯಾಕ್ಟ್ ಚೆಕ್ ವೆಬ್ ಸೈಟ್ ಆಲ್ಟ್ ನ್ಯೂಸ್ ನ ಸಹ ಸ್ಥಾಪಕ ಮುಹಮ್ಮದ್ ಝುಬೈರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಖಾತರಿ ಪಡಿಸಿದ್ದಾರೆ. ವಿಶ್ವವೇ ಖಂಡನೆ ವ್ಯಕ್ತ ಪಡಿಸಿದ ಈ ದಾಳಿಯಲ್ಲಿ ಭಾರತೀಯ ಧ್ವಜವು ಕಂಡುಬಂದಿರುವುದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.

Join Whatsapp
Exit mobile version