Home ಟಾಪ್ ಸುದ್ದಿಗಳು ಟ್ರಕ್ ಡ್ರೈವರ್’ಗಳ ಕಷ್ಟ ಆಲಿಸಿದ ರಾಹುಲ್ ಗಾಂಧಿ

ಟ್ರಕ್ ಡ್ರೈವರ್’ಗಳ ಕಷ್ಟ ಆಲಿಸಿದ ರಾಹುಲ್ ಗಾಂಧಿ

ನವದೆಹಲಿ: ದೆಹಲಿಯಿಂದ ಚಂಡೀಗಢವರಗೆ ಟ್ರಕ್ ನಲ್ಲಿ ಪ್ರಯಾಣಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚಾಲಕರೊಂದಿಗೆ ಮಾತನಾಡಿ ಅವರ ಸಂಕಷ್ಟಗಳನ್ನು ಅರಿತುಕೊಂಡಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಜನ ನಾಯಕ ರಾಹುಲ್ ಗಾಂಧಿ ಅವರು, ಟ್ರಕ್ ಡ್ರೈವರ್ ಗಳೊಂದಿಗೆ ತೆರಳಿ ಅವರ ಕಷ್ಟಗಳನ್ನು ಆಲಿಸಿದರು. ರಾಹುಲ್ ಗಾಂಧಿ ಅವರ ಜತೆ ದೆಹಲಿಯಿಂದ ಚಂಡೀಗಢವರೆಗೂ ಪ್ರಯಾಣಿಸಿದರು. ಮಾಧ್ಯಮ ವರದಿಗಳ ಪ್ರಕಾರ, ಭಾರತದಲ್ಲಿ ಸುಮಾರು 90 ಲಕ್ಷ ಟ್ರಕ್ ಚಾಲಕರಿದ್ದಾರೆ. ಅವರಿಗೆ ಅವರದೇ ಆದ ಕಷ್ಟಗಳಿವೆ. ಅವರ ಮನ್ಕೀ ಬಾತ್ ಕೇಳುವ ಕೆಲಸವನ್ನು ರಾಹುಲ್ ಗಾಂಧಿ ಮಾಡಿದ್ದಾರೆ‘ ಎಂದು ಬರೆದುಕೊಂಡಿದೆ.


ರಾಹುಲ್ ಗಾಂಧಿ ಟ್ರಕ್ನಲ್ಲಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Join Whatsapp
Exit mobile version