ಮಂಗಳೂರು : ಕರ್ನಾಟಕ ರಾಜ್ಯ ಸರಕಾರದಿಂದ ಕೋವಿಡ್ ನಿಗ್ರಹಿಸಲು ನೂತನ ಮಾರ್ಗಸೂಚಿ ಪ್ರಕಟಗೊಂಡಿದೆ. ಈ ದಿಢೀರ್ ಪರಿಷ್ಕೃತ ಮಾರ್ಗಸೂಚಿಯ ಪ್ರಕಾರ ಅಗತ್ಯ ಸೇವೆ ಹೊರತುಪಡಿಸಿ ಬಾಕಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಬೇಕಾಗಿದೆ. ಇದರ ಅನ್ವಯ ಮಂಗಳೂರಿನಲ್ಲಿಂದು ಸೆಂಟ್ರಲ್ ಮಾರ್ಕೆಟ್ ಪರಿಸರದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲು ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದಾರೆ.
ರಾಜ್ಯ ಸರಕಾರದ ಲಂಗು ಲಗಾಮಿಲ್ಲದ ಬೇಕಾಬಿಟ್ಟಿ ಆದೇಶಗಳ ವಿರುದ್ಧ ಸ್ಥಳೀಯ ಅಂಗಡಿ ಮಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡವರ ಹೊಟ್ಟೆ ಮೇಲೆ ಹೊಡೆಯುವ ಸರಕಾರದ ಬೇಕಾಬಿಟ್ಟಿ ನಿರ್ಧಾರಗಳ ಕುರಿತು ವರ್ತಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಮಾರ್ಕೆಟ್ ಪರಿಸರದಲ್ಲಿ ರಸ್ತೆಗಳನ್ನು ಒತ್ತುವರಿ ಮಾಡಿಕೊಂಡು ಅಂಗಡಿ ವ್ಯವಹಾರ ನಡೆಸುತ್ತಿದ್ದ ಅಂಗಡಿಗಳ ಲೈಸನ್ಸ್ ರದ್ದುಪಡಿಸಲು ಮನಪಾ ಅಧಿಕಾರಿಗಳು ಸೂಚಿಸಿದ್ದಾರೆ.