Home ಕರಾವಳಿ ಸುಳ್ಯದಲ್ಲಿ ಹೊಸ ಸಮುದ್ರ ಕಂಡು ಹಿಡಿದ ಕಂದಾಯ ಸಚಿವ !: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟ್ರೋಲ್

ಸುಳ್ಯದಲ್ಲಿ ಹೊಸ ಸಮುದ್ರ ಕಂಡು ಹಿಡಿದ ಕಂದಾಯ ಸಚಿವ !: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟ್ರೋಲ್

ಮಂಗಳೂರು: ತೀವ್ರ ಕಡಲ್ಕೊರೆತ ಉಂಟಾಗಿರುವ ಉಳ್ಳಾಲದ ಬಟ್ಪಪಾಡೆ ಗ್ರಾಮಕ್ಕೆ ಕಂದಾಯ ಸಚಿವರ ಆರ್.ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.ಆದರೆ ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ “ಸುಳ್ಯದಲ್ಲಿ ಉಂಟಾದ ಕಡಲ್ಕೊರೆತ ವೀಕ್ಷಿಸಿದ್ದೇನೆ” ಎಂದು ಬರೆದಿರುವುದು ವ್ಯಾಪಕ ಟ್ರೋಲ್ ಗೆ ಒಳಗಾಗಿದೆ.


ಅವರು ತಮ್ಮ ಇನ್ ಸ್ಟಾದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಕಡಲ್ಕೊರೆತ ಆದ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ಮಾಡಿ, ಪರಿಹಾರ ಕಾರ್ಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿಲಾಯಿತು ಎಂದು ಬರೆದು ಕೊಂಡಿದ್ದರು, ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟ್ರೋಲ್ ಆಗಿದೆ.


ಹಲವರು, ಸುಳ್ಯಕ್ಕೆ ಹೊಸ ಸಮುದ್ರ ಕಂಡು ಹಿಡಿದ ಕಂದಾಯ ಸಚಿವ, ಸುಳ್ಯದಲ್ಲಿ ಸಮುದ್ರ ಯಾವಾಗ ಆದದ್ದು ಎಂದು ಪ್ರಶ್ನಿಸಿ ಟ್ರೋಲ್ ಮಾಡುತ್ತಿದ್ದಾರೆ.

Join Whatsapp
Exit mobile version