ಮಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಪಿಎಫ್‌ಐ ನಾಯಕರ ಮೇಲಿನ ಪ್ರಕರಣಗಳನ್ನು ಹಿಂಪಡೆದ ದಾಖಲೆಗಳಿದ್ದರೆ ಬಿಜೆಪಿ ಸರ್ಕಾರ ಬಹಿರಂಗಪಡಿಸಲಿ ಎಂದು ವಿಧಾನಸಭಾ ಪ್ರತಿಪಕ್ಷದ ಉಪನಾಯಕ ಯುಟಿ ಖಾದರ್ ಹೇಳಿದ್ದಾರೆ.
ಸಮಾಜದಲ್ಲಿ ಅಶಾಂತಿ, ಭಯ ಕೊಲೆ ಮಾಡುವ ಯಾರೇ ಆಗಲಿ ಅವರ ವಿರುದ್ಧ ಸಾಕ್ಷ್ಯಾಧಾರ ಇದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ಎಲ್ಲರಿಗೂ ಈ ಕಾನೂನುನ್ನು ಅನ್ವಯ ಮಾಡಬೇಕು. ರಾಜ್ಯದಲ್ಲಿ ಈಗ ಸರ್ಕಾರ ಬಿಜೆಪಿ ನಡೆಸುತ್ತಿದೆ. ನಾವು ಪಿಎಫ್‌ಐ ನಾಯಕರ ಕೇಸ್ ಹಿಂಪಡೆದ ಸಾಕ್ಷಿ ತೋರಿಸಲಿ. ಸರ್ಕಾರದ ಬಳಿ ದಾಖಲೆ ಇದ್ದರೆ ತೋರಿಸಲಿ ಎಂದ್ದಿದ್ದಾರೆ.
ನಮ್ಮ ಅವಧಿಯಲ್ಲಿ ಗುಂಪು ಗಲಭೆ, ರೈತರ ಹೋರಾಟ ಆದಾಗ ಹಾಕಿದ ಕೇಸ್‌ಗಳನ್ನು ಹಿಂಪಡೆದಿರಬಹುದು. ಬಿಜೆಪಿ ಅಪಪ್ರಚಾರ ಮಾಡುವ ಬದಲು ಸಾಕ್ಷ್ಯಾಧಾರವನ್ನು ತೋರಿಸಲಿ. ಇವರ ಕಾಲದಲ್ಲಿ ಯಾರೆಲ್ಲ ಕೇಸ್ ಗಳನ್ನು ಹಿಂಪಡೆದಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಯುಟಿ ಖಾದರ್ ಸವಾಲೆಸೆದಿದ್ದಾರೆ.