ಲೋಕಸಭೆ ಚುನಾವಣೆ ಬಳಿಕ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಬಿಜೆಪಿ ಸೇರಲಿದ್ದಾರೆ: ಮಾಜಿ ಸಚಿವ ಕೆಟಿಆರ್

Prasthutha|

ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಬಿಜೆಪಿ ಸೇರಲಿದ್ದಾರೆ ಎಂದು ತೆಲಂಗಾಣ ಮಾಜಿ ಸಚಿವ ಕೆಟಿ ರಾಮರಾವ್ ಹೇಳಿದ್ದಾರೆ.

- Advertisement -


ಹೈದರಾಬಾದ್ ನ ತೆಲಂಗಾಣ ಭವನದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಮರಾವ್, ರೇವಂತ್ ರೆಡ್ಡಿ ಪ್ರಧಾನಿ ಮೋದಿಯನ್ನು ತಮ್ಮ ಅಣ್ಣ ಎಂದು ಕರೆದಿದ್ದಾರೆ. ರೇವಂತಿ ರೆಡ್ಡಿ ಬಿಜೆಪಿಗೆ ಸೇರುವುದು ಪಕ್ಕಾ ಎಂದಿದ್ದಾರೆ.


ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನು ಗೆಲ್ಲುವುದು ಕಷ್ಟ ಎಂದು ಪ್ರತಿಪಾದಿಸಿದ ಕೆಟಿಆರ್, ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಸೋಲಿನ ನಂತರ ಬಿಜೆಪಿಗೆ ನಿಷ್ಠೆಯನ್ನು ಬದಲಾಯಿಸಿದ ರಾಜ್ಯದ ಮೊದಲ ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ ಆಗಲಿದ್ದಾರೆ ಎಂದು ಹೇಳಿದರು.



Join Whatsapp