ರೇವಣ್ಣ ಆಪ್ತ, ಗುತ್ತಿಗೆದಾರನ ಮೇಲೆ ದಾಳಿಗೆ ಯತ್ನ

Prasthutha|

ಹಾಸನ: ಮಾಜಿ ಸಚಿವ, ಹೊಳೆನರಸೀಪುರ ಕ್ಷೇತ್ರದ ಶಾಸಕ ಹೆಚ್​ ಡಿ ರೇವಣ್ಣ ಅವರ ಆಪ್ತ ಹಾಗೂ ಗುತ್ತಿಗೆದಾರ ಅಶ್ವತ್ಥ್​ ಮೇಲೆ ದಾಳಿಗೆ ಯತ್ನ ನಡೆದಿದೆ.

- Advertisement -

ರೇವಣ್ಣರ ನಿವಾಸದಿಂದ ಚನ್ನರಾಯಪಟ್ಟಣದ ತಮ್ಮ ನಿವಾಸಕ್ಕೆ ಹೊರಟ್ಟಿದ್ದ ಅಶ್ವತ್ಥ್ ಮೇಲೆ ದುಷ್ಕರ್ಮಿಗಳು ದಾಳಿಗೆ ಯತ್ನಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಕೊಲೆ ಯತ್ನ ಕೇಸ್ ದಾಖಲಾಗಿದೆ. ಐಪಿಸಿ ಸೆಕ್ಷೆನ್ 307, 341, 427 ಅಡಿ ಕೇಸ್ ದಾಖಲಾಗಿದೆ.

ಮಂಗಳವಾರ ರಾತ್ರಿ ಸುಮಾರು 8.30ರ ಸಮಯದಲ್ಲಿ ಹೊಳೆನರಸೀಪುರದಿಂದ ಚನ್ನರಾಯಪಟ್ಟಣ ಕಡೆಗೆ ಹೋಗುವ ಮಾರ್ಗಮಧ್ಯೆ ಸೂರನಹಳ್ಳಿ ಗ್ರಾಮದ ಬಳಿ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ಕೆಲ ಕಿಡಿಗೇಡಿಗಳು ಕಲ್ಲು ಮತ್ತು ಮಾರಕಾಸ್ತ್ರಗಳಿಂದ ಫಾರ್ಚ್ಯೂನರ್ ಕಾರಿನ ಮೇಲೆ ಅಟ್ಯಾಕ್ ಮಾಡಿದ್ದರು. ಈ ವೇಳೆ ಸಮಯ ಪ್ರಜ್ಞೆಯಿಂದ ಕಾರು ಚಲಾಯಿಸಿಕೊಂಡು ಗುತ್ತಿಗೆದಾರ ಅಶ್ವತ್ಥ್ ಅವರು ಎಸ್ಕೇಪ್ ಆಗಿದ್ದರು. ಕಳೆದ ಆಗಸ್ಟ್ 9 ರಂದು ರೇವಣ್ಣ ಆಪ್ತ ಕೃಷ್ಣೇಗೌಡನನ್ನ ಕೊಲೆ ಮಾಡಲಾಗಿತ್ತು. ಹೀಗಾಗಿ ಹಲ್ಲೆ ಯತ್ನ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.