Home ಟಾಪ್ ಸುದ್ದಿಗಳು ಕೆಎಟಿ ಸದಸ್ಯರಾಗಿ ನಿವೃತ್ತ ಡಿಜಿಪಿ ಔರಾದ್ಕರ್ ನೇಮಕ

ಕೆಎಟಿ ಸದಸ್ಯರಾಗಿ ನಿವೃತ್ತ ಡಿಜಿಪಿ ಔರಾದ್ಕರ್ ನೇಮಕ

ಬೆಂಗಳೂರು: ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ಸದಸ್ಯರಾಗಿ ನಿವೃತ್ತ ಪೊಲೀಸ್( ಡಿಜಿಪಿ‌) ರಾಘವೇಂದ್ರ ಔರಾದ್ಕರ್​ ಅವರನ್ನು ನೇಮಕ ಮಾಡಲಾಗಿದೆ.

ರಾಘವೇಂದ್ರ ಔರಾದ್ಕರ್​ ಅವರನ್ನು ಕೆಎಟಿ ಸದಸ್ಯರಾಗಿ ಕೇಂದ್ರ ಸರ್ಕಾರ  ನೇಮಕ ಮಾಡಿರುವ ಆದೇಶಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್​ ಅಂಕಿತ ಹಾಕಿದ್ದಾರೆ.  ಕೆಎಟಿಗೆ ಮೊದಲ ಬಾರಿಗೆ ಐಪಿಎಸ್​ ಅಧಿಕಾರಿ ನೇಮಕ ಮಾಡಿದ್ದು, ಮುಂದಿನ 4 ವರ್ಷಗಳ ಕೆಎಟಿ ಸದಸ್ಯರಾಗಿ ರಾಘವೇಂದ್ರ ಔರಾದ್ಕರ್​ ಕಾರ್ಯನಿರ್ವಹಿಸಲಿದ್ದಾರೆ.

ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದು ಕೊರತೆ ನಿವಾರಣೆ ಹಾಗೂ ಪಿಂಚಣಿ ಸಚಿವಾಲಯ ರಾಷ್ಟ್ರಪತಿಗಳ ಆದೇಶದಂತೆ ರಾಘವೇಂದ್ರ ಔರಾದ್ಕರ್​ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು, ತಿಂಗಳಿಗೆ 2ಲಕ್ಷ 25ಸಾವಿರ ವೇತನ ನಿಗದಿ ಮಾಡಲಾಗಿದೆ.

ಕರ್ನಾಟಕ ರಾಜ್ಯ ಆಡಳಿತ ಮಂಡಳಿಯಲ್ಲಿ ಸದ್ಯ ಆರ್.ಬಿ.ಬೂದಿಹಾಳ್ ಅಧ್ಯಕ್ಷರಾಗಿದ್ದರೆ,ನ್ಯಾಯಾಂಗ ಸದಸ್ಯರಾಗಿ ನಾರಾಯಣ, ಟಿ.ನಾರಾಯಣಸ್ವಾಮಿ, ಆರ್. ಬಿ.ಸತ್ಯನಾರಾಯಣ ಸಿಂಗ್, ಆಡಳಿತ ಸದಸ್ಯರಾಗಿ ನಿವೃತ್ತ ಐಎಎಸ್ ಅಧಿಕಾರಿಗಳಾದ ಲತಾ ಕೃಷ್ಣ ರಾವ್, ಎಸ್.ಕೆ. ಪಟ್ನಾಯಕ್ , ಎನ್ .ಶಿವಶೈಲಂ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಪೈಕಿ ಸತ್ಯನಾರಾಯಣ ಸಿಂಗ್ ಕಲಬುರಗಿ ಪೀಠದಲ್ಲಿ ಮತ್ತು ನಾರಾಯಣಸ್ವಾಮಿ ಬೆಳಗಾವಿ ಪೀಠದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Join Whatsapp
Exit mobile version