ಇಸ್ಲಾಮಾಬಾದ್: ಪಾಕಿಸ್ತಾನ ಸೇನೆಯ ನಿವೃತ್ತ ಬ್ರಿಗೇಡಿಯರ್ ಅಮೀರ್ ಹಂಝ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಝೀಲಂ ಪ್ರದೇಶದ ಲೀಲಾ ಇಂಟರ್‌ಚೇಂಜ್‌ನಲ್ಲಿ ನಡೆದಿದೆ.
ಘಟನೆಯ ವೇಳೆ ಬ್ರಿಗೇಡಿಯರ್ ಹಂಝ ಅವರು ಪತ್ನಿ ಮತ್ತು ಮಗಳೊಂದಿಗೆ ಪ್ರಯಾಣಿಸುತ್ತಿರುವಾಗ ಘಟನೆ ನಡೆದಿದೆ.
ದಾಳಿಕೋರರು ಹಮ್ಜಾ ಕಾರನ್ನು ನಿಲ್ಲಿಸಲು ಅಥವಾ ದರೋಡೆ ಮಾಡಲು ಪ್ರಯತ್ನಿಸದೆ ಅವರ ಮೇಲೆ ಗುಂಡು ಹಾರಿಸಿದ್ದಾರೆ. ದಾಳಿಕೋರರ ಏಕೈಕ ಉದ್ದೇಶ ಹಂಝರನ್ನು ಕೊಲ್ಲುವುದೇ ಆಗಿತ್ತು ಎಂದು ಸೂಚಿಸುತ್ತದೆ. ಇದು ಉದ್ದೇಶಿತ ಹತ್ಯೆ ಎಂದು ಅಧಿಕಾರಿಗಳು ನಂಬಿದ್ದಾರೆ.
ಈ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.