ಚಿಲ್ಲರೆಹಣದುಬ್ಬರ 5.02%ಗೆಇಳಿಕೆ: ತರಕಾರಿದರಇಳಿಕೆಯೇ ಕಾರಣ!

Prasthutha|

ಹೊಸದಿಲ್ಲಿ: ಚಿಲ್ಲರೆ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಮೂರು ಶೇ. 5.02ಕ್ಕೆ ಇಳಿದಿದೆ. ಇದು ತಿಂಗಳ ಕನಿಷ್ಠ ಮಟ್ಟವಾಗಿದೆ.  ಆಗಸ್ಟ್‌ನಲ್ಲಿ ಶೇ. 6.83ರಷ್ಟಿದ್ದ ಹಣದುಬ್ಬರ, ಕಳೆದ ತಿಂಗಳು ಗಣನೀಯವಾಗಿ ಕಡಿಮೆಯಾಗಿದೆ. ಮುಖ್ಯವಾಗಿ ಆಹಾರ ಬೆಲೆಗಳ ದರ ಇಳಿಕೆಯು ಚಿಲ್ಲರೆ ಹಣದುಬ್ಬರದ ಮೇಲೆ ಪ್ರಭಾವ ಬೀರಿದೆ.

ಪ್ರಸ್ತುತ ಹಣದುಬ್ಬರವು ರಿಸರ್ವ್‌ ಬ್ಯಾಂಕ್‌ನ ಸಹನಾ ಮಟ್ಟವಾದ ಶೇ. 6ಕ್ಕಿಂತ ಕೆಳಕ್ಕೆ ಇಳಿದಿದೆ. ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರವು ಆಗಸ್ಟ್‌ನಲ್ಲಿ ಶೇ. 6.83 ಮತ್ತು 2022ರ ಸೆಪ್ಟೆಂಬರ್‌ನಲ್ಲಿ ಶೇ. 7.41ರಷ್ಟಿತ್ತು. ಪ್ರಸಕ್ತ ವರ್ಷದ ಜೂನ್‌ನಲ್ಲಿ ಶೇ. 4.87ಕ್ಕೆ ಇಳಿದಿದ್ದ ಹಣದುಬ್ಬರ ಬಳಿಕ ಏರುಗತಿಗೆ ಮರಳಿತ್ತು. ಈಗ ಮತ್ತೆ ಇಳಿಕೆಯ ಹಳಿಗೆ ಮರಳಿದೆ.

- Advertisement -

ರಾಷ್ಟ್ರೀಯ ಅಂಕಿ-ಅಂಶ ಕಚೇರಿ (ಎನ್‌ಎಸ್‌ಒ) ಗುರುವಾರ ಅಂಕಿ-ಅಂಶ ಬಿಡುಗಡೆ ಮಾಡಿದ್ದು,  ಆಹಾರದ ಬುಟ್ಟಿಯಲ್ಲಿನ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಶೇ. 9.94ರಿಂದ 6.56ಕ್ಕೆ ಇಳಿದಿದೆ. ರಿಸರ್ವ್‌ ಬ್ಯಾಂಕ್‌ ತನ್ನ ದ್ವೈಮಾಸಿಕ ವಿತ್ತೀಯ ನೀತಿ ನಿರ್ಧಾರದ ವಿಷಯದಲ್ಲಿ ಮುಖ್ಯವಾಗಿ ಚಿಲ್ಲರೆ ಹಣದುಬ್ಬರವನ್ನು ಪರಿಗಣಿಸುತ್ತದೆ.