ಮಂಗಳೂರು: ಸರ್ಕಾರ ಮಾಡಿದ ಕೆಲಸ ಕಾರ್ಯದ ಆಧಾರವಾಗಿ ಜನ ಮತ ನೀಡಿದ್ದಾರೆ. ನಿರೀಕ್ಷೆಯಂತೆ ಫಲಿತಾಂಶ ಬರುತ್ತಿದೆ ಎಂದು ಮಾಜಿ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.
ಪಂಚರಾಜ್ಯ ಚುನಾವಣಾ ಫಲಿತಾಂಶ ವಿಚಾರಕ್ಕೆ ಸಂಬಂಧಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್ ನಲ್ಲಿ ಬಿಜೆಪಿ ನೆಲೆ ಇರಲಿಲ್ಲ. ಅಕಾಲಿದಳ ಕಾಂಗ್ರೆಸ್ ಜಂಟಿಯಾಗಿ ಬಿಜೆಪಿ ವಿರುದ್ಧ ಗೂಬೆ ಕೂರಿಸಿ ಪಂಜಾಬ್ ನಲ್ಲಿ ಬಿಜೆಪಿ ವಿಸ್ತರಣೆ ಮಾಡದಂತೆ ಷಡ್ಯಂತ್ರ ರೂಪಿಸಿದ್ದರು. ಹೀಗಾಗಿ ಬಿಜೆಪಿ ಗೆ ಪಂಜಾಬ್ ನಲ್ಲಿ ಸ್ವಲ್ಪ ಹಿನ್ನಡೆ ಯಾಗಿದೆ. ಆದರೂ ಕಳೆದ ಬಾರಿಗಿಂತ ಪಂಜಾಬ್ ನಲ್ಲಿ ಬಿಜೆಪಿ ಸೀಟು ಅಧಿಕವಾಗಿದೆ. ಉಳಿದ ನಾಲ್ಕು ಕಡೆ ನಿರೀಕ್ಷೆಯಂತೆ ಫಲಿತಾಂಶ ಬರುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಈ ಹಿಂದೆಯೇ ಧೂಳಿಪಟ ಆಗಿದೆ. ನರೇಂದ್ರ ಮೋದಿ ಆಡಳಿತದ ವರ್ಚಸ್ಸಿನ ಎದುರು ಬೇರೆ ಯಾವ ಪಾರ್ಟಿಯೂ ಉಳಿಯಲು ಸಾಧ್ಯವಿಲ್ಲ. ಕಾಂಗ್ರೆಸ್ ಇಷ್ಟು ದಿನ ದೇಶ ಕೊಳ್ಳೆ ಹೊಡೆದು ಭ್ರಷ್ಟಾಚಾರ ಮಾಡಿದೆ. ಒಂದೇ ಕುಟುಂಬದವರು ರಾಜಕೀಯ ಮಾಡಿರುವುದರಿಂದ ಅವರ ಅಧ್ಯಾಯ ಮುಗಿಯಲು ಕಾರಣವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು.