Home ಟಾಪ್ ಸುದ್ದಿಗಳು ನೌಕರರ ಸಮಸ್ಯೆ ಎದುರಿಸುತ್ತಿರುವ ಅಮೆರಿಕ| ಸೆಪ್ಟೆಂಬರ್ ನಲ್ಲಿ ಉದ್ಯೋಗ ಬಿಟ್ಟವರೆಷ್ಟು ಗೊತ್ತೇ?

ನೌಕರರ ಸಮಸ್ಯೆ ಎದುರಿಸುತ್ತಿರುವ ಅಮೆರಿಕ| ಸೆಪ್ಟೆಂಬರ್ ನಲ್ಲಿ ಉದ್ಯೋಗ ಬಿಟ್ಟವರೆಷ್ಟು ಗೊತ್ತೇ?

ನ್ಯೂಯಾರ್ಕ್: ಅಮೆರಿಕದಲ್ಲಿ ಉದ್ಯೋಗಿಗಳು ವ್ಯಾಪಕವಾಗಿ ತಮ್ಮ ಕೆಲಸವನ್ನು ತೊರೆಯುತ್ತಿದ್ದಾರೆ ಎಂದು ವರದಿಯಾಗಿದೆ. ಸುಮಾರು 44 ಲಕ್ಷ ಜನರು, ಅಂದರೆ ಅಮೆರಿಕದಲ್ಲಿನ ಒಟ್ಟು ಉದ್ಯೋಗಿಗಳ ಮೂರು ಶೇಕಡಾ ಜನರು ಸೆಪ್ಟೆಂಬರ್‌ ನಲ್ಲಿ ತಮ್ಮ ಕೆಲಸವನ್ನು ತೊರೆದಿದ್ದಾರೆ.

US ಡಿಪಾರ್ಟ್ ಮೆಂಟ್ ಆಫ್ ಲೇಬರ್ಸ್ ಬಿಡುಗಡೆಗೊಳಿಸಿದ ‘ಲೇಬಲ್ ಡಿಪಾರ್ಟ್ ಮೆಂಟ್ ಜೋಬ್ ಓಪನಿಂಗ್ ಆಂಡ್ ಲೇಬಲ್ ಟರ್ನೋವರ್ ಸರ್ವೇ’ ಯಲ್ಲಿ ಈ ಅಂಕಿ ಅಂಶ ಬಹಿರಂಗಗೊಂಡಿದೆ.
ಆಗಸ್ಟ್ ನಲ್ಲಿ ಕೇವಲ 164,000 ಜನರು ತಮ್ಮ ಕೆಲಸವನ್ನು ತೊರೆದಿದ್ದಾರೆ. ಕೋವಿಡ್ ನಂತರ ಅಮೆರಿಕದ ಆರ್ಥಿಕತೆಗೆ ಇದೊಂದು ದೊಡ್ಡ ಸವಾಲಾಗಿದೆ.

ಈ ನಡುವೆ ಜಾಹಿರಾತು ನೀಡಿದರೂ ಜನ ಕೆಲಸ ಹುಡುಕಿಕೊಂಡು ಬರುತ್ತಿಲ್ಲ ಎಂದು ಕೆಲವು ಕಂಪನಿಗಳು ಆತಂಕ ವ್ಯಕ್ತಪಡಿಸಿವೆ.

Join Whatsapp
Exit mobile version