ಕಕ್ಕಬ್ಬೆ: ಪಯ್ನರಿ ರಸ್ತೆ ತಕ್ಷಣ ದುರಸ್ತಿಗೊಳಿಸುವಂತೆ ಗ್ರಾಮಸ್ಥರಿಂದ ಕೊಡಗು ಡಿ ಸಿ ಗೆ ಮನವಿ

Prasthutha|

ಮಡಿಕೇರಿ: ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಯ್ನರಿ ಜುಮಾ ಮಸೀದಿ ಪ್ರದೇಶದಲ್ಲಿರುವ ರಸ್ತೆ ಸಂಪೂರ್ಣವಾಗಿ ಹದಗಟ್ಟಿದ್ದು ತಕ್ಷಣ ದುರಸ್ತಿಗೊಳಿಸಬೇಕೆಂದು ಒತ್ತಾಯಿಸಿ ಸ್ತಳೀಯ ಗ್ರಾಮಸ್ಥರು ಕಕ್ಕಬ್ಬೆ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿ, ಈ ಕೂಡಲೇ ದುರಸ್ಥಿಗೊಳಿಸುವಂತೆ ಕೊಡಗು ಜಿಲ್ಲಾದಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ರಸ್ತೆಯನ್ನು ಸರಿಪಡಿಸಲು ಹಲವು ಬಾರಿ ಮನವಿ ಸಲ್ಲಿಸಿದರೂ ದುರಸ್ತಿ ಕಾರ್ಯ ಕೈಗೊಂಡಿಲ್ಲ ಮತ್ತು ಚರಂಡಿ ಅವ್ಯವಸ್ತೆಯಿಂದ ಕೂಡಿದ್ದು , ವಾಹನ ಸಂಚಾರ ಮಾತ್ರವಲ್ಲದೆ ಪಾದಾಚಾರಿಗಳು ನಡೆದಾಡಲು ಸಾದ್ಯವಾಗುತ್ತಿಲ್ಲವೆಂಧು ಪ್ರತಿಭಟನಾಕಾರರು ಅಸಮಧಾನ ವ್ಯಕ್ತಪಡಿಸಿದರು.

- Advertisement -

ಮನವಿ ಸಲ್ಲಿಸಿದಾಗಲೆಲ್ಲ ಕೇವಲ ಭರವಸೆ ನೀಡುತ್ತಾರೆಯೇ ಹೊರತು ವರ್ಷ ಕಳೆದರೂ ಡಾಂಬರೀಕರಣಗೊಳಿಸಲಿಲ್ಲ, ರಸ್ತೆ ಕಾಮಗಾರಿಯನ್ನು ತಕ್ಷಣ ಆರಂಭಿಸದಿದ್ದಲ್ಲಿ ಡಿಸಿ ಕಚೇರಿ ಎದುರು ಬ್ರಹತ್ ಪ್ರತಿಭಟನೆ ಕೈಗೊಳ್ಳುವುದಾಗಿಯೂ ಈ ಬರುವ ಜಿಲ್ಲಾ ಪಂಚಾಯತ್ ಎಲಕ್ಶನ್ನಲ್ಲಿ ಊರಿನ ಜನರು ಮತ ಬಹಿಷ್ಕಾರದ ಮೂಲಕ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿಯೂ ಕಕ್ಕಬ್ಬೆ ಪಂಚಾಯಿತಿ ಅದ್ಯಕ್ಷರಾದ ಕಲಿಯಂಡ ಸಂಪ ಮತ್ತು ಪಯ್ನರಿ ಮಸೀದಿಯ ಮಾಜಿ ಅದ್ಯಕ್ಷರು ಮಹಮ್ಮದ್ ಹಾಜಿ ಹಾಗೂ ಗ್ರಾಮದ ಯುವಕರು ಎಚ್ಚರಿಕೆ ನೀಡಿದರು.

- Advertisement -