Home ಟಾಪ್ ಸುದ್ದಿಗಳು ಬಂಡಾಯದ ಕಹಳೆ ಮೊಳಗಿಸಿದ ರೇಣುಕಾಚಾರ್ಯ!

ಬಂಡಾಯದ ಕಹಳೆ ಮೊಳಗಿಸಿದ ರೇಣುಕಾಚಾರ್ಯ!

ದಾವಣಗೆರೆ: ಹಾಲಿ ಸಂಸದ ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರಗೆ ಲೋಕಸಭಾ ಟಿಕೆಟ್‌ ಪ್ರಕಟವಾಗುತ್ತಿದ್ದಂತೆ ಅಸಮಾಧಾನಗೊಂಡ ರೇಣುಕಾಚಾರ್ಯ ಬಂಡಾಯದ ಕಹಳೆ ಮೊಳಗಿಸಿದ್ದಾರೆ. ಅವರ ಟೀಮ್ ಬಿಜೆಪಿ ನಾಯಕರು ಮತ್ತು ಹಾಲಿ ಸಂಸದ ಸಿದ್ದೇಶ್ವರ್‌ಗೆ ಪಾಠ ಕಲಿಸಲು ಮುಂದಾಗಿದೆ.

ನಿನ್ನೆ ಟಿಕೆಟ್ ಘೋಷಣೆಗೂ ಮುನ್ನವೇ ದಾವಣಗೆರೆ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಕುಟುಂಬಕ್ಕೆ ಯಾವ ಕಾರಣಕ್ಕೂ ಈ ಬಾರಿ ಟಿಕೆಟ್ ನೀಡಬಾರದು. ಟಿಕೆಟ್ ನೀಡಿದರೆ ಅವರಿಗೆ ನಮ್ಮ ಬೆಂಬಲ ಇರುವುದಿಲ್ಲ. ಈಗಿರೋ ಲೋಕಸಭಾ ಸದಸ್ಯರು ನಾಲ್ಕು ಬಾರಿ ಗೆದ್ದಿದ್ದಾರೆ, ನಾವು ಸೋತಿರಬಹುದು. ಮಾಜಿ ಶಾಸಕರು, ಮಾಜಿ ಸಚಿವರಿಂದ ಈಗಿರೋ ಸಂಸದರಿಗೆ ವಿರೋಧ ಇದೆ. ದಾವಣಗೆರೆಯಲ್ಲಿ ನನ್ನ ಬಿಟ್ಟರೆ ಯಾರೂ ಇಲ್ಲ. ಶಾಮನೂರು ಶಿವಶಂಕರಪ್ಪ ವಿರುದ್ಧ ಹೋರಾಟ ಮಾಡಿರುವವನು ನಾನೊಬ್ಬನೇ. ನನಗೆ ಟಿಕೆಟ್ ಕೊಡಿ, ನನ್ನ ಹೆಂಡತಿಗೆ ಕೊಡಿ, ಇಲ್ಲ ಮಕ್ಕಳಿಗೆ ಕೊಡಿ ಅಂತ ಹೇಳ್ತಿದ್ದಾರೆ. ಅವರ ದುರಹಂಕಾರದ ಮಾತುಗಳ ಬಗ್ಗೆ ವಿರೋಧ ಇದೆ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಬಹಿರಂಗವಾಗಿ ಹೇಳಿದ್ದರು.

ಸ್ಥಳೀಯ ನಾಯಕರ ವಿರೋಧದ ಮಧ್ಯೆಯೂ ಹಾಲಿ ಸಂಸದ ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರಗೆ ಲೋಕಸಭಾ ಟಿಕೆಟ್‌ ಪ್ರಕಟವಾಗುತ್ತಿದ್ದಂತೆ ದಾವಣಗೆರೆ ಬಿಜೆಪಿಯಲ್ಲಿ ಬಂಡಾಯದ ಕಹಳೆ ಮೊಳಗಿದೆ. ಮಾಜಿ ಸಚಿವ ಎಂಪಿ ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ್, ಮಾಜಿ ಶಾಸಕ ಗುರುಸಿದ್ದನಗೌಡ ಪುತ್ರ ಡಾ. ರವೀಂದ್ರ ಸೇರಿ ಇಂದು ಮಧ್ಯಾಹ್ನ 12 ಗಂಟೆಗೆ ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಮನೆಯಲ್ಲಿ ಅಸಮಾಧಾನಿತರ ಸಭೆ ಸೇರಲು ತೀರ್ಮಾನ ಮಾಡಲಾಗಿದೆ.

Join Whatsapp
Exit mobile version