ಬೆಂಗಳೂರು: ವಿವಾದಾತ್ಮಕ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಕಥಾವಸ್ತು, ಸಿನಿಮಾದಲ್ಲಿ ತೋರಿಸಿರೋ ವಿಚಾರಗಳು ಅನೇಕ ಚರ್ಚೆಗಳನ್ನು ಹುಟ್ಟುಹಾಕಿವೆ. ಸದ್ಯ ಈಗ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡದವರು ದೇಶ ದ್ರೋಹಿಗಳು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ಶಾಸಕರು, ಮುಖಂಡರು ವಿಕೃತ ಮನಸ್ಸಿನವರು. ಸ್ಪೀಕರ್ ಆಹ್ವಾನಿಸಿದ್ದರಿಂದ ಸೌಜನ್ಯಕ್ಕಾದರೂ ಸಿನಿಮಾಗೆ ಬರಬೇಕಿತ್ತು. ಇಲ್ಲಿರುವವರು ವೋಟ್ ಬ್ಯಾಂಕ್, ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ ಎಂದರು .
ಕಾಶ್ಮೀರ ಪಂಡಿತರ ಚಿತ್ರಹಿಂಸೆ ಕಾಶ್ಮೀರದಲ್ಲಿನ ಪಂಡಿತರ ಮಾರಣಹೋಮಕ್ಕೆ ಹಿಂದಿನ ಸರ್ಕಾರವೇ ಕಾರಣ. ಹಿಂದಿನ ಸರ್ಕಾರ ವೋಟಿಗೋಸ್ಕರ ಭಯೋತ್ಪಾದಕರಿಗೆ, ಉಗ್ರಗಾಮಿಗಳಿಗೆ ಬೆಂಬಲಕೊಟ್ಟು ಮಾರಣಹೋಮ ಆಗಿದೆ. ನಮ್ಮ ಕೇಂದ್ರ ಸರ್ಕಾರ ಬಂದ ಬಳಿಕ ಮೋದಿಯವರ ಭರವಸೆಯಂತೆ ಕಾಶ್ಮೀರದಲ್ಲಿ ಉಸಿರಾಡಲು ಅವಕಾಶ ಆಗಿದೆ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ