Home ಟಾಪ್ ಸುದ್ದಿಗಳು ಖ್ಯಾತ ಫ್ಯಾಷನ್ ಡಿಸೈನರ್‌ ಪ್ರತ್ಯುಷಾ ಶವವಾಗಿ ಪತ್ತೆ

ಖ್ಯಾತ ಫ್ಯಾಷನ್ ಡಿಸೈನರ್‌ ಪ್ರತ್ಯುಷಾ ಶವವಾಗಿ ಪತ್ತೆ

ಹೈದರಾಬಾದ್​: ಖ್ಯಾತ ಫ್ಯಾಷನ್ ಡಿಸೈನರ್ ಪ್ರತ್ಯುಷಾ ಗರಿಮೆಲ್ಲಾ ಹೈದರಾಬಾದ್​​ ನ ಬಂಜಾರಾ ಹಿಲ್ಸ್‌ ನಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಕಾರ್ಬನ್ ಮೊನಾಕ್ಸೈಡ್‌ ಸೇವಿಸಿ ಪ್ರತ್ಯುಷಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು,ಅನುಮಾನಾಸ್ಪದ ಸಾವು ಪ್ರಕರಣದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರತ್ಯುಷಾ ಚಿತ್ರರಂಗದ ಸೆಲೆಬ್ರಿಟಿಗಳಿಗೆ ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. ದೇಶದ ಟಾಪ್ 30 ಫ್ಯಾಷನ್ ಡಿಸೈನರ್‌ಗಳಲ್ಲಿ ಇವರು ಕೂಡ ಒಬ್ಬರಾಗಿದ್ದರು.

Join Whatsapp
Exit mobile version