Home ಟಾಪ್ ಸುದ್ದಿಗಳು ಸಾಲಾರ್ ಜಂಗ್ ಮ್ಯೂಸಿಯಂನಿಂದ ಸಾವರ್ಕರ್ ಭಾವಚಿತ್ರ ತೆರವುಗೊಳಿಸಲು ಕಾಂಗ್ರೆಸ್ ಆಗ್ರಹ

ಸಾಲಾರ್ ಜಂಗ್ ಮ್ಯೂಸಿಯಂನಿಂದ ಸಾವರ್ಕರ್ ಭಾವಚಿತ್ರ ತೆರವುಗೊಳಿಸಲು ಕಾಂಗ್ರೆಸ್ ಆಗ್ರಹ

ಹೈದರಾಬಾದ್: ಸಾಲಾರ್ ಜಂಗ್ ಮ್ಯೂಸಿಯಂನಿಂದ ಸಂಘ ಪರಿವಾರದ ನಾಯಕ ಸಾವರ್ಕರ್ ಭಾವಚಿತ್ರವನ್ನು ತೆರವುಗೊಳಿಸುವಂತೆ ತೆಲಂಗಾಣ ಕಾಂಗ್ರೆಸ್ ಬುಧವಾರ ಸರ್ಕಾರವನ್ನು ಆಗ್ರಹಿಸಿದೆ.

ಸಾವರ್ಕರ್ ಚಿತ್ರ ತೆರವುಗೊಳಿಸಿದ ಜಾಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಮಹಾತ್ಮ ಗಾಂಧಿ ಅಥವಾ ಹೈದರಾಬಾದ್ ನಿಝಾಮರ ಫೋಟೋಗಳನ್ನು ಅಳವಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆ.

ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ನಾಯಕರು ಹೈದರಾಬಾದ್’ನ ಸಾಲಾರ್ ಜಂಗ್ ಮ್ಯೂಸಿಯಂ ಭೇಟಿಯ ವೇಳೆ ಸಾವರ್ಕರ್ ಫೋಟೋ ಇರಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಮತ್ತು ತಕ್ಷಣದಿಂದ ಜಾರಿಗೆ ಬರುವಂತೆ ಅದನ್ನು ತೆರವುಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Join Whatsapp
Exit mobile version