ಮಂಗಳೂರು: ಲರ್ನ್ ದಿ ಕುರ್’ಆನ್ 10ನೇ ಹಂತದ ಪರೀಕ್ಷೆಯು ಫೆಬ್ರವರಿ 5 ರಂದು ವಿವಿಧ ಸೆಂಟರ್’ನಲ್ಲಿ ನಡೆಯಲಿದ್ದು, ಇದರ ಪ್ರಚಾರಾರ್ಥ ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಕುದ್ರೋಳಿ ಘಟಕದ ವತಿಯಿಂದ ಇಂದು (07.01.2023) ಸಂಜೆ ಗಂಟೆ 6:30 ರಿಂದ ರಾತ್ರಿ 9:30ರವರೆಗೆ ಕುದ್ರೋಳಿ A1 ಭಾಗ್’ನಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಕುದ್ರೋಳಿ ಘಟಕದ ಅಧ್ಯಕ್ಷ ನಸೀರುದ್ದೀನ್ ಹೈಕೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮೌಲವಿ ಸಲಾಹುದ್ದೀನ್ ಚುಝೆಲಿಯವರು ಮಲಯಾಳಂ ಭಾಷೆಯಲ್ಲಿ “ತೌಹೀದ್ ಮತ್ತು ಶಿರ್ಕ್” ಎಂಬ ವಿಷಯದ ಬಗ್ಗೆ ಹಾಗೂ ಮೌಲವಿ ಮುಸ್ತಫಾ ದಾರಿಮಿಯವರು ಬ್ಯಾರಿ ಭಾಷೆಯಲ್ಲಿ “ಸ್ವರ್ಗದ ಹಾದಿ” ಎಂಬ ವಿಷಯದ ಬಗ್ಗೆ ಪ್ರವಚನ ನೀಡಲಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶವಿದೆ ಎಂದು ಅವರು ತಿಳಿಸಿದ್ದಾರೆ.