Home ಟಾಪ್ ಸುದ್ದಿಗಳು ಸರ್ಕಾರ ಅನುದಾನಿತ ಅಲ್ಪಸಂಖ್ಯಾತ ಸಂಸ್ಥೆಗಳಲ್ಲಿ ಧಾರ್ಮಿಕ ಶಿಕ್ಷಣ ನೀಡಬಾರದು: ಸುಪ್ರೀಂ ಕೋರ್ಟ್

ಸರ್ಕಾರ ಅನುದಾನಿತ ಅಲ್ಪಸಂಖ್ಯಾತ ಸಂಸ್ಥೆಗಳಲ್ಲಿ ಧಾರ್ಮಿಕ ಶಿಕ್ಷಣ ನೀಡಬಾರದು: ಸುಪ್ರೀಂ ಕೋರ್ಟ್

ನವದೆಹಲಿ: ಸಂಪೂರ್ಣವಾಗಿ ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ತೆರಿಗೆದಾರರ ಹಣ ಸಮಾನವಾಗಿ ಬಳಕೆಯಾಗಬೇಕು. ಸರ್ಕಾರದಿಂದ ಅನುದಾನ ಪಡೆದು, ಒಂದು ಸಮುದಾಯದ ಧಾರ್ಮಿಕ ಬೋಧನೆ ಮಾಡಲು ಹೇಗೆ ಸಾಧ್ಯ. ಇದು ಅಲ್ಪಸಂಖ್ಯಾತ ಅಥವಾ ಬಹುಸಂಖ್ಯಾತ ಶಿಕ್ಷಣ ಸಂಸ್ಥೆಗಳೇ ಆಗಿರಲಿ, ಸರ್ಕಾರದಿಂದ ಅನುದಾನ ಪಡೆದರೆ, ಧಾರ್ಮಿಕ ಬೋಧನೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಭಾಗಶಃ ಅಥವಾ ಸರ್ಕಾರದ ಬಜೆಟ್‌ನಲ್ಲಿ ಅನುದಾನ ಪಡೆಯುತ್ತಿರುವ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಕಡ್ಡಾಯವಾಗಿ ಧಾರ್ಮಿಕ ಶಿಕ್ಷಣ ಬೋಧಿಸುವಂತಿಲ್ಲ. ಇದನ್ನು ಮಕ್ಕಳ ಆಯ್ಕೆಗೆ ಬಿಡಬೇಕು ಎಂದೂ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಜಸ್ಟೀಸ್ ಸಂಜೀವ ಖನ್ನಾ, ಸೂರ್ಯಕಾಂತ್, ಜೆಬಿ ಪರಿದಿವಾಲ್, ದಿಪಾಂಕರ್ ದತ್ತಾ, ಮನೋಜ್ ಮಿಶ್ರಾ, ಸತೀಶ್ ಶರ್ಮಾ ಸೇರಿದ ಪೀಠ ಈ ಕುರಿತು ವಿಚಾರಣೆ ನಡೆಸಿ ಆದೇಶ ನೀಡಿದೆ.

Join Whatsapp
Exit mobile version