Home ರಾಷ್ಟ್ರೀಯ 2022ರ ವಿಶ್ವದ ಅತ್ಯುತ್ತಮ ಉದ್ಯೋಗದಾತರ ಪಟ್ಟಿಯಲ್ಲಿ 20ನೇ ಸ್ಥಾನವನ್ನು ಅಲಂಕರಿಸಿದ ರಿಲಯನ್ಸ್ ಕಂಪೆನಿ

2022ರ ವಿಶ್ವದ ಅತ್ಯುತ್ತಮ ಉದ್ಯೋಗದಾತರ ಪಟ್ಟಿಯಲ್ಲಿ 20ನೇ ಸ್ಥಾನವನ್ನು ಅಲಂಕರಿಸಿದ ರಿಲಯನ್ಸ್ ಕಂಪೆನಿ

ದೆಹಲಿ: 2022ರ ವಿಶ್ವದ ಅತ್ಯುತ್ತಮ ಉದ್ಯೋಗದಾತರ ಪಟ್ಟಿಯಲ್ಲಿ ರಿಲಯನ್ಸ್ ಕಂಪೆನಿಯು 20ನೇ ಸ್ಥಾನವನ್ನು ಅಲಂಕರಿಸಿದೆ.

ಫೋಬ್ಸ್‌ ನಿಯತಕಾಲಿಕವು ‘2022ರ ವಿಶ್ವದ ಅತ್ಯುತ್ತಮ ಉದ್ಯೋಗದಾತ’ರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭಾರತದಲ್ಲಿ ಅಗ್ರಸ್ಥಾನದಲ್ಲಿರುವ ರಿಲಾಯನ್ಸ್ ಲಿಮಿಟೆಡ್ ಕಂಪೆನಿಯು ಇಪ್ಪತ್ತನೇ ಸ್ಥಾನದಲ್ಲಿದೆ.

ಈ ಪಟ್ಟಿಯಲ್ಲಿ ದಕ್ಷಿಣ ಕೊರಿಯಾದ ಸ್ಯಾಮ್ಸಂಗ್‌ ಎಲೆಕ್ಟ್ರಾನಿಕ್ಸ್‌ ಮೊದಲ ಸ್ಥಾನದಲ್ಲಿದೆ. ಅಮೆರಿಕದ ಮೈಕ್ರೊಸಾಫ್ಟ್‌, ಐಬಿಎಂ, ಆಲ್ಫಾಬೆಟ್ ಮತ್ತು ಆ್ಯಪಲ್‌ ಕಂಪನಿಗಳು ನಂತರದ ಸ್ಥಾನಗಳನ್ನು ಅಲಂಕರಿಸಿದೆ.

ಜರ್ಮನಿ ಮೂಲದ ಬಿಎಂಡಬ್ಲ್ಯು 13ನೇ ಸ್ಥಾನದಲ್ಲಿದೆ. ಅಮೆಜಾನ್‌ ಮಾರಾಟ ಕಂಪೆನಿ 14ನೇ ಸ್ಥಾನ ಪಡೆದುಕೊಂಡಿದೆ.

Join Whatsapp
Exit mobile version