ರಾಜೀವ್ ಹಂತಕರ ಬಿಡುಗಡೆ: ಸುಪ್ರೀಂ ನಿರ್ಧಾರ ಸ್ವಾಗತಾರ್ಹ ಎಂದ ಎಂ.ಕೆ. ಸ್ಟಾಲಿನ್

Prasthutha|

ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಅಪರಾಧಿಗಳನ್ನು ಅವಧಿಗೆ ಮೊದಲು ಬಿಡುಗಡೆಗೊಳಿಸುವ ಸುಪ್ರೀಂ ಕೋರ್ಟ್’ನ ನಿರ್ಧಾರ ಸ್ವಾಗತಾರ್ಹ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಿಳಿಸಿದ್ದಾರೆ.

- Advertisement -

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಆರು ಮಂದಿ ಅಪರಾಧಿಗಳನ್ನು ಬಿಡುಗಡೆಗೊಳಿಸುವ ಸುಪ್ರೀಂ ಕೋರ್ಟ್’ನ ತೀರ್ಮಾನವನ್ನು ತಾನು ಸ್ವಾಗತಿಸುವುದಾಗಿ ಅವರು ಟ್ವೀಟ್ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಿಕ್ಕಿದ ಜಯ ಎಂದು ಸ್ಟಾಲಿನ್ ಬಣ್ಣಿಸಿದ್ದಾರೆ.

ವಿಪಕ್ಷದಲ್ಲಿ ಇದ್ದ ಸಂದರ್ಭದಲ್ಲೂ, ಇದೀಗ ಅಧಿಕಾರದಲ್ಲಿದ್ದಾಗಲೂ ಡಿಎಂಕೆ ಈ ಅಪರಾಧಿಗಳ ಬಿಡುಗಡೆಗೆ ಧ್ವನಿ ಎತ್ತಿದೆ ಎಂದು ತಿಳಿಸಿದ್ದಾರೆ.

- Advertisement -

ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದಲ್ಲಿ ಬಂಧಿತ ನಳಿನಿ ಶ್ರೀಹರನ್ ಸೇರಿದಂತೆ ಒಟ್ಟು ಆರು ಮಂದಿಯನ್ನು ಉತ್ತಮ ನಡತೆಯ ಆಧಾರದಲ್ಲಿ ಸುಪ್ರೀಂ ಕೋರ್ಟ್ ಬಿಡುಗಡೆಗೊಳಿಸಲು ಆದೇಶ ನೀಡಿದೆ.



Join Whatsapp