ರಹ್ಮಾನ್ ಉದ್ಯಾವರಗೆ ಮಾಧ್ಯಮ ಪ್ರಶಸ್ತಿ

Prasthutha|

ಕಾಸರಗೋಡು: ಜಿಲ್ಲೆಯ ಎಂಡೋ ಸಲ್ಫಾನ್ ಪೀಡಿತರಿಗಾಗಿ ಹೋರಾಟವನ್ನು ನಡೆಸಿ ಅವರಿಗೆ ಸರಕಾರದಿಂದ ಸಿಗುವ ಸಕಲ ಸವಲತ್ತುಗಳನ್ನು ಒದಗಿಸಿ ಕೊಡಲು ಸತತ ಪ್ರಯತ್ನ ನಡೆಸುತ್ತಿರುವ ಅತಿ ಜೀವನ ಚ್ಯಾರಿಟೇಬಲ್ ಸೊಸೈಟಿ ಹಾಗೂ ಒರುಮ ಕೂಟಾಯಿಮ ಎಂಬೀ ಸಂಘಟನೆಯ ಸಂಯುಕ್ತಾಶ್ರಯದಲ್ಲಿ ಕಾಸರಗೋಡು ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿರುವ ಉತ್ತಮ ಪ್ರಾದೇಶಿಕ ವರದಿಗಾರರನ್ನು ಆಯ್ಕೆ ಮಾಡಿ ಮಾದ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಂಜೇಶ್ವರದಿಂದ ಕರಾವಳಿ ಅಲೆ ವರದಿಗಾರ ರಹ್ಮಾನ್ ಉದ್ಯಾವರ, ಕಾಸರಗೋಡಿನಿಂದ ಉತ್ತರ ದೇಶಂ ವರದಿಗಾರ ಶಾಫಿ ತೆರುವತ್ತ್, ವೆಳ್ಳರಿ ಕುಂಡ್ ನಿಂದ ಮನೋರಮ ವರದಿಗಾರ ರಾಘವನ್ ಹಾಗೂ ಹೊಸ ದುರ್ಗದಿಂದ ಕಾರವಲ್ ವರದಿಗಾರ ಬಾಬು ಎಂಬಿವರಿಗೆ ಮಾಧ್ಯಮ ಪ್ರಶಶ್ತಿ ನೀಡಿ ಗೌರವಿಸಲಾಯಿತು.
ಜೊತೆಯಾಗಿ ಎಂಡೋ ಸಲ್ಫಾನ್ ಪೀಡಿತರ ಬಗ್ಗೆ ಅತೀ ಹೆಚ್ಚಿನ ವರದಿ ಮಾಡಿ ಸರಕಾರದ ಗಮನ ಸೆಳೆದ ಜಿಲ್ಲೆಯ ಮಾದ್ಯಮ ವರದಿಗಾರರಾದ ಉರ್ಮೀಶ್ ಹಾಗೂ ಸುಕುಮಾರ ಎಂಬಿವರಿಗೂ ಪ್ರಶಶ್ತಿ ನೀಡಲಾಗಿದೆ.
ಬಾನುವಾರದಂದು ಬೆಳಿಗ್ಗೆ ಕಾಞಂಗಾಡಿನ ಪುದಿಯ ಕೋಟ ಸೂರ್ಯವಂಶಿ ಅಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಕಾಸರಗೋಡು ಶಾಸಕ ಎನ್ ಎ ನೆಲ್ಲಿಕುನ್ನು ಪ್ರಶಸ್ತಿ ನೀಡಿದ್ದಾರೆ.
ಈ ಸಂದರ್ಭ ಸಂಘಟನೆಯ ಪ್ರಮುಖರು, ಜನಪ್ರತಿನಿಧಿಗಳು, ಸಮಾಜ ಸೇವಾ ಕಾರ್ಯಕರ್ತರು ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡರು.

Join Whatsapp
Exit mobile version