Home ಟಾಪ್ ಸುದ್ದಿಗಳು ಬೆಂಗಳೂರಿನಲ್ಲಿ ಉತ್ತಮ ಆಡಳಿತ ಕುರಿತ ಪ್ರಾದೇಶಿಕ ಸಮ್ಮೇಳನ

ಬೆಂಗಳೂರಿನಲ್ಲಿ ಉತ್ತಮ ಆಡಳಿತ ಕುರಿತ ಪ್ರಾದೇಶಿಕ ಸಮ್ಮೇಳನ

ಬೆಂಗಳೂರು: ಉತ್ತಮ ಆಡಳಿತಕ್ಕಾಗಿ ನಾಗರಿಕರು, ಉದ್ಯಮಿಗಳು ಮತ್ತು ಸರ್ಕಾರದ ನಡುವಿನ ಸಮನ್ವಯತೆ’ ಗಾಗಿ ಪ್ರಾದೇಶಿಕ ಸಮ್ಮೇಳನಕ್ಕೆ ಸೋಮವಾರ ಬೆಂಗಳೂರಿನಲ್ಲಿ ಚಾಲನೆ ದೊರೆಯಿತು.

ಸಮ್ಮೇಳನದ ಕರ್ಟನ್ ರೈಸರ್ ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ಡಿಪಿಎಆರ್ (ಎಆರ್) ಪ್ರಧಾನ ಕಾರ್ಯದರ್ಶಿ ಡಾ. ಶ್ರೀವತ್ಸ ಕೃಷ್ಣ, “ಕೇಂದ್ರದ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ, ಸಿಬ್ಬಂದಿ ಸಚಿವಾಲಯ (ಡಿಎಆರ್ ಪಿಜಿ), ಸಾರ್ವಜನಿಕ ಕುಂದುಕೊರತೆಗಳು ಹಾಗೂ ಪಿಂಚಣಿ ಇಲಾಖೆ ಸಹಯೋಗದಲ್ಲಿ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆಯು ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಹೋಟೆಲ್ ಶಾಂಗ್ರಿ-ಲಾದಲ್ಲಿ ಜುಲೈ 11 ಮತ್ತು 12 ರಂದು ಪ್ರಾಂತೀಯ ಪ್ರಾದೇಶಿಕ ಸಮ್ಮೇಳನ ನಡೆಯಲಿದೆ,” ಎಂದು ತಿಳಿಸಿದರು.

“ಜುಲೈ 12ರಂದು ಸಮ್ಮೇಳದಲ್ಲಿ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಮುಖ್ಯ ಭಾಷಣ ಮಾಡಲಿದ್ದು, ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಖಾತೆ ರಾಜ್ಯ ಸಚಿವರಾದ ಡಾ. ಜಿತೇಂದ್ರ ಸಿಂಗ್ ಉತ್ತಮ ಆಡಳಿತದ ಬಗ್ಗೆ ಭಾಷಣ ಮಾಡಲಿದ್ದಾರೆ,” ಎಂದು ಹೇಳಿದರು.

ಕಾರ್ಯಕ್ರಮದ ರೂಪುರೇಷೆ ಕುರಿತು ಮಾಹಿತಿ ನೀಡಿದ ಡಿಎಆರ್ ಪಿಜಿ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಅಮರ್ನಾಥ್, “ಸರ್ಕಾರದ ಯೋಜನೆಗಳಲ್ಲಿ ಭಾಗಿಯಾಗುವ ಪ್ರಮುಖ ಉದ್ಯಮಿಗಳು ಮತ್ತು ಸ್ಟಾರ್ಟ್ಅಪ್ ಸಂಸ್ಥಾಪಕರನ್ನು ಒಟ್ಟುಗೂಡಿಸುವ ಪ್ರಯತ್ನವಾಗಿ ಟೆಕ್ನಾಲಜಿ ಹಬ್, ಭಾರತ ಮತ್ತು ಏಷ್ಯಾದ ಸ್ಟಾರ್ಟ್ ಅಪ್ ರಾಜಧಾನಿ, ವಾಣಿಜ್ಯೋದಮಿಗಳ ನೆಚ್ಚಿನ ತಾಣ ಬೆಂಗಳೂರಿನಲ್ಲಿ ಈ ಸಮ್ಮೇಳನವು ಆಯೋಜಿಸಲಾಗಿದೆ,” ಎಂದರು.

“ನಾಗರಿಕರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಲು ಪ್ರಯತ್ನಿಸುತ್ತಿದ್ದೇವೆ. ನಾಗರಿಕರಿಗೆ ಸಮಗ್ರ ಸೇವೆ ಒದಗಿಸುವುದು ನಮ್ಮ ಆದ್ಯತೆ, ಈ ನಿಟ್ಟಿನಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ಕೇಂದ್ರ ಮತ್ತು ರಾಜ್ಯಗಳೆರಡರಲ್ಲೂ ಉತ್ತಮ ಆಡಳಿತಕ್ಕಾಗಿ ಹೊಸ ಆಲೋಚನೆಗಳನ್ನು ಹುಟ್ಟುಹಾಕುವ ಈ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳ ಸಮಾನ ಮನಸ್ಕರು ವಿಷಯ ವಿನಿಮಯ ಮಾಡಿಕೊಳ್ಳಲ್ಲಿದ್ದಾರೆ,” ಎಂದು ಅಮರ್ ನಾಥ್ ತಿಳಿಸಿದರು.

Join Whatsapp
Exit mobile version