Home ರಾಜ್ಯ ಎಲ್ಲವನ್ನೊಳಗೊಂಡ ಮತ್ತು ಸುಸ್ಥಿರ ಬೆಳವಣಿಗೆಯ ಉತ್ತೇಜನಕ್ಕಾಗಿ ಆದಾಯ ತೆರಿಗೆ ದರ ತಗ್ಗಿಸಿ: ಸಂಜೀವ್ ಬಜಾಜ್

ಎಲ್ಲವನ್ನೊಳಗೊಂಡ ಮತ್ತು ಸುಸ್ಥಿರ ಬೆಳವಣಿಗೆಯ ಉತ್ತೇಜನಕ್ಕಾಗಿ ಆದಾಯ ತೆರಿಗೆ ದರ ತಗ್ಗಿಸಿ: ಸಂಜೀವ್ ಬಜಾಜ್

ಬೆಂಗಳೂರು: ಆರ್ಥಿಕತೆಯಲ್ಲಿ ಬೇಡಿಕೆಯನ್ನು ಪುನಶ್ಚೇತನಗೊಳಿಸಲು ಗ್ರಾಹಕರ ಕಿಸೆಯಲ್ಲಿ ಹೆಚ್ಚು ಹಣ ಸೇರುವುದು ಅಗತ್ಯವಾಗಿದ್ದು, ಸರ್ಕಾರ ಮುಂದಿನ ಸುಧಾರಣೆಯಲ್ಲಿ ವೈಯಕ್ತಿಯ ಅದಾಯ ತೆರಿಗೆ ದರಗಳಲ್ಲಿ ಕಡಿತ ಮಾಡುವ ಬಗ್ಗೆ ಆಲೋಚಿಸಬೇಕು. ಇದರಿಂದ ಆದಾಯ ಹೆಚ್ಚಾಗಲಿದ್ದು, ಬೇಡಿಕೆ ಚಕ್ರವನ್ನು ಪುನರುಜ್ಜೀವನಗೊಳಿಸಿದಂತಾಗುತ್ತದೆ ಎಂದು ಸಿಐಐ ಅಧ್ಯಕ್ಷ ಸಂಜೀವ್ ಬಜಾಜ್ ಹೇಳಿದ್ದಾರೆ.

ಸಿಐಐ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಬಜಾಜ್ ಅವರು ಮೊದಲ ಬಾರಿಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.  ಆರ್ಥಿಕತೆ ಪುನಶ್ಚೇತನಕ್ಕೆ ಸಿಐಐ ಅಧ್ಯಕ್ಷರು ಇದೇ ಮೊದಲ ಬಾರಿಗೆ ಈ ಎರಡು ಸಲಹೆಗಳನ್ನು ನೀಡಿದ್ದಾರೆ. ಭಾರತದ ಗಟ್ಟಿ ತಳಹದಿಯಿಂದಾಗಿ ಬೆಳವಣಿಗೆಯ ಚಾಲಕರು ಬಲಿಷ್ಠವಾಗಿದ್ದಾರೆ: ಆರ್ಥಿಕ ಬೆಳವಣಿಗೆ 23 ರ ಹಣಕಾಸು ಸಾಲಿನಲ್ಲಿ  7.4 ದಿಂದ 8.2% ರಷ್ಟಿರಲಿದೆ ಎಂದರು. 

ಎರಡನೆಯದಾಗಿ ಜಾಗತಿಕ ಆರ್ಥಿಕತೆಯಲ್ಲಿ ಅನಿಶ‍್ಚಿತ ವಾತಾವರಣ, ವಿದೇಶಿ ಬಂಡವಾಳದ ಹೊರ ಹರಿವಿನ ದೃಷ್ಟಿಯಿಂದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಭಾರತ ತನ್ನ ವಿದೇಶಿ ವಿನಿಮಯ ಮೀಸಲು ಹೆಚ್ಚಿಸುವ ಅಗತ್ಯವಿದೆ ಎಂದು ಬಜಾಜ್ ಹೇಳಿದರು.

ಹೆಚ್ಚಿನ ಬೆಳವಣಿಗೆಯ ಕಕ್ಷೆಗೆ ತಲುಪಿಸಲು ಅನುಸರಿಸಬಹುದಾದ ಸಣ್ಣ ಮತ್ತು ಮಧ್ಯಮ ಅವಧಿಯ ಸಾಧನೆಗಳನ್ನು ಸಹ ವಿವರಿಸಿದರು. ಕೇಂದ್ರದ ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆಯನ್ನು ವಿಸ್ತರಿಸುವ ಪ್ರಾಮುಖ್ಯತೆ ಮತ್ತು ಅದರ ವ್ಯಾಪ್ತಿಯೊಳಗೆ ಹೆಚ್ಚಿನ ವಲಯಗಳನ್ನು ಸೇರ್ಪಡೆ ಮಾಡುವ, ವಿಶೇಷವಾಗಿ ಶ್ರಮದಾಯಕ ಹಾಗೂ ಸ್ಪರ್ಧಾತ್ಮಕ ದೇಶೀಯ ಉದ್ಯಮವನ್ನು ನಿರ್ಮಿಸುವ ಅಗತ್ಯವಿದೆ. ಪಿಎಲ್ಐ ಯೋಜನೆಗೆ ವಿದ್ಯುದ್ವಿಭಜಕ ವಲಯ ಸೇರಿರುವುದರಿಂದ  ಬರುವ 2030 ರ ವೇಳೆಗೆ 5 ದಶಲಕ್ಷ ಹಸಿರು ಜಲ ಜನಕ ಉತ್ಪಾದಿಸುವ ಮತ್ತು ಹಸಿರುವ ಜಲ ಜನಕ ಉತ್ಪಾದನೆ ಮಾಡಲು ಸಹಕಾರಿಯಾಗಲಿದೆ ಎಂದು ಹೇಳಿದರು. 

ಯೋಜನೆಗಳ ಅನುಮೋದನೆಯಲ್ಲಿ ಪಾರದರ್ಶಕತೆ ತಂದು ಇದರ ವೇಗ ಹೆಚ್ಚಿಸಿದರೆ ನಿಯಂತ್ರಣ ಮತ್ತು ಅನುಸರಣೆ ವೆಚ್ಚ ಕಡಿಮೆ ಮಾಡಬಹುದು,  ಹೀಗಾಗಿ ಕೇಂದ್ರ ಮತ್ತು ರಾಜ್ಯಗಳಲ್ಲಿ ಅಂಗೀಕಾರ ಪಡೆಯಲು ರಾಷ್ಟ್ರೀಯ ಏಕ ಗವಾಕ್ಷಿ  [ಎನ್.ಎಸ್.ಡಬ್ಲ್ಯೂ.ಎಸ್] ಪೋರ್ಟಲ್ ಜಾರಿಗೆ ತರಬೇಕು. ಇದಲ್ಲದೇ ಮೂಲ ಸೌಕರ್ಯ ವಲಯದ ಗತಿ ಶಕ್ತಿ ಯೋಜನೆ ಉತ್ತಮ ಯೋಜನೆಯಾಗಿದ್ದು, ಈ ಉಪಕ್ರಮದಡಿ ಎಲ್ಲಾ ರಾಜ್ಯಗಳು ಒಳಗೊಳ್ಳಬೇಕು.  ಮೂಲ ಸೌಕರ್ಯ ವಲಯಗಳ ಅಂತರವನ್ನು ತಗ್ಗಿಸಲು ಪೋರ್ಟಲ್ ನಲ್ಲಿ ಖಾಸಗಿ ವಲಯದಿಂದ ಸಲಹೆಗಳನ್ನು ಪಡೆಯುವ ಹಾಗೂ ಯೋಜನಾ ಉದ್ದೇಶಗಳಿಗೆ ಈ ವಲಯವನ್ನು ಪರಿಗಣಿಸಬಹುದು ಎಂದು ಹೇಳಿದರು. 

ಉದ್ಯಮದ ಮೇಲಿನ ಕ್ರಾಸ್ ಸಬ್ಸಿಡಿ ಹೊರೆ ತೊಡೆದುಹಾಕಲು ಮತ್ತು ಲಭ್ಯವಿರುವ ಗುಣಮಟ್ಟದಲ್ಲಿ ಸುಧಾರಣೆ ತರುವುದು ಮುಖ್ಯವಾಗಿದೆ. ಗುಣಮಟ್ಟದ ವಿದ್ಯುತ್ ಒದಗಿಸಲು ವಿತರಣಾ ವಲಯದ ಸುಧಾರಣೆ ಅಗತ್ಯವಾಗಿದೆ. ಉದ್ಯಮಕ್ಕೆ ಇನ್ ಪುಟ್ ತೆರಿಗೆ ಕ್ರಿಡಿಟ್ ಸೌಲಭ್ಯ ದೊರೆಯುವಂತೆ ಮಾಡಲು ಇಂಧನ ಮತ್ತು ವಿದ್ಯುತ್ ವಲಯವನ್ನು ಜಿ.ಎಸ್.ಟಿ. ವ್ಯಾಪ್ತಿಗೆ ತರಬೇಕು ಎಂದು  ಬಜಾಜ್ ಪ್ರತಿಪಾದಿಸಿದರು.

ಸಂಶೋಧನೆ ಮತ್ತು ಅಭಿವೃದ್ಧಿ ವಲಯದ ವೆಚ್ಚವನ್ನು ಜಿಡಿಪಿಯ 0.7 ಕ್ಕೆ ಹೆಚ್ಚಿಸಬೇಕು. ಆರ್ ಅಂಡ್ ಡಿ ಪ್ರಯತ್ನಗಳು ಉದ್ಯಮ ಸಂಬಂಧಿತ ಸಂಶೋಧನೆಗಳ ಕಡೆಗೆ ಸಾಗಬೇಕು. ರಕ್ಷಣಾ ವಲಯದಿಂದ ಪ್ರಾರಂಭವಾಗಿ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವವನ್ನು ಉತ್ತೇಜಿಸಬೇಕು. 2007 ರಲ್ಲಿ ರೂಪಿಸಲಾದ ಇಂಧನ ನೀತಿಯನ್ನು ಮಾರ್ಪಡಿಸಿ ಹೊಸ ಇಂಧನ ನೀತಿಯನ್ನು ವಿನ್ಯಾಸಗೊಳಿಸುವ ಅಗತ್ಯವಿದೆ.  ಎಲ್ಲವನ್ನೊಳಗೊಂಡ ಬೆಳವಣಿಗೆಯ ಕಾಳಜಿ ವ್ಯಕ್ತಪಡಿಸಿದ ಶ್ರೀ ಬಜಾಜ್, ಬಲಿಷ್ಠವಾದ ಎಂ.ಎಸ್.ಎಂ.ಇ ವ್ಯವಸ್ಥೆಯನ್ನು ನಿರ್ಮಿಸಲು ಸಾಲ ಸೌಲಭ್ಯ ಅಗತ್ಯದ ಬಗ್ಗೆ ತಮ್ಮ ನಿಲುವು ವ್ಯಕ್ತಪಡಿಸಿದರು. ಪರಿಸ್ಥಿತಿಯನ್ನು ತಗ್ಗಿಸಲು ಇ.ಸಿ.ಎಲ್.ಜಿ.ಎಸ್ [ತುರ್ತು ಸಾಲ ಖಾತರಿ ಯೋಜನೆ] ಕಾರ್ಯಕ್ರಮವನ್ನು ಸರ್ಕಾರ ಸಾಂಕ್ರಾಮಿಕ ಸಂದರ್ಭದಲ್ಲಿ ಜಾರಿಗೆ ತಂದಿತ್ತು. ಎಂಎಸ್ಎಂಇ ಗಳ ವ್ಯವಹಾರ ಸುಗಮಗೊಳಿಸಲು ಎಂ.ಎಸ್.ಎಂ.ಇಗೆ ಸರ್ಕಾರದಿಂದ ಶಾಶ್ವತವಾದ ಸಾಲ ಖಾತರಿ ವ್ಯವಸ್ಥೆಯನ್ನು ತರಬೇಕು ಎಂದರು. ಸರ್ಕಾರ ಘೋಷಿಸಿದ್ದ ಎಂ.ಎಸ್.ಎಂ.ಇ ಸಾಲ ಖಾತರಿ ಯೋಜನೆ 2023 ರ ಮಾರ್ಚ್ 31 ಕ್ಕೆ ಮುಕ್ತವಾಗುತ್ತಿದೆ. 

ಬರುವ 2047 ರ ವೇಳೆಗೆ ಭಾರತವನ್ನು 40 ಟ್ರಿಲಿಯನ್ ದೇಶವನ್ನಾಗಿ ಮಾಡಲು ಉದ್ಯಮ ವಲಯ ಮತ್ತು ಸಿಐಐ ಪಾತ್ರದ ಕುರಿತು ತಮ್ಮ ಅಭಿಮತ ವ್ಯಕ್ತಪಡಿಸಿದ ಅವರು, ಈ ನಿಟ್ಟಿನಲ್ಲಿ ಸಿಐಐ ಮತ್ತು ಉದ್ಯಮ ವಲಯ ಸ್ವತಃ ಮಾಡಬಹುದಾದ ಸಾಕಷ್ಟು ಸಂಗತಿಗಳಿವೆ. ಬಿಯಾಂಡ್ ಇಂಡಿಯಾ@75 ಬೆಳವಣಿಗೆ, ಸ್ಪರ್ಧಾತ್ಮಕ. ಸುಸ್ಥಿರತೆ ಮತ್ತು ಅಂತಾರಾಷ್ಟ್ರೀಕರಣದೊಂದಿಗೆ ಹಲವಾರು ಹೊಸ ಉಪಕ್ರಮಗಳನ್ನು ಯೋಜಿಸಿದೆ ಎಂದರು. 

ಉದಾಹರಣೆಗೆ ಕೌಶಲ್ಯ ವಲಯದಲ್ಲಿ ಸಿಐಐ ತನ್ನನ್ನು ತೊಡಗಿಸಿಕೊಳ್ಳುವುದನ್ನು ಮುಂದುವರೆಸುತ್ತದೆ ಮತ್ತು 1.5 ಲಕ್ಷ ಯುವಜನಾಂಗವನ್ನು ಕೌಶಲ್ಯಗೊಳಿಸುತ್ತಿದೆ ಮತ್ತು ಇನ್ನೂ ಎರಡು ಲಕ್ಷ ಯುವ ಸಮೂಹಕ್ಕೆ ನೆರವು ನೀಡುತ್ತದೆ.  ಸಿಒಡಿಬಿ ಸೂಚ್ಯಂಕವನ್ನು ನಿರ್ಮಿಸಲು ಪ್ರಸ್ತಾಪಿಸಿದ್ದು, ಇದರಿಂದ ಉತ್ಪಾದನಾ ವಲಯದ ಸ್ಪರ್ಧಾತ್ಮಕತೆ ಸುಧಾರಣೆಯಾಗಲಿದೆ ಮತ್ತು ರಾಜ್ಯಗಳ ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಯನ್ನು ಬಲಗೊಳಿಸಬೇಕು. ಸುಸ್ಥಿರತೆ ಮೇಲೆ ಸಿಐಐ ನಿವ್ವಳ ಶೂನ್ಯ ಪರಿವರ್ತನೆಗಾಗಿ ಖಾಸಗಿ ವಲಯದ ಮಾರ್ಗಸೂಚಿಗಳನ್ನು ತಯಾರಿಸುವ ಪ್ರಕ್ರಿಯೆಯನ್ನು ಸರಳಗೊಳಿಸಲು ಸಾಧ್ಯವಾಗಲಿದೆ. ಇದಕ್ಕಾಗಿ 2070ರ ವೇಳೆಗೆ ವೇಳೆಗೆ ನಿವ್ವಳ ಶೂನ್ಯ ಸಾಧಿಸಲು ಇಂಗಾಲರಹಿತ ನೀಲನಕ್ಷೆ ರೂಪಿಸಲು ರಾಜ್ಯ ಸರ್ಕಾರಗಳು ಮತ್ತು ವಲಯಗಳೊಂದಿಗೆ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುತ್ತದೆ ಎಂದರು.

Join Whatsapp
Exit mobile version