Home ಮಾಹಿತಿ ಸರ್ಕಾರಿ ಅಧಿಕಾರಿಗಳ ಐಡಿ ಕಾರ್ಡ್​ಗೆ ಕೆಂಪು-ಹಳದಿ ಬಣ್ಣದ ಟ್ಯಾಗ್​ ಕಡ್ಡಾಯ

ಸರ್ಕಾರಿ ಅಧಿಕಾರಿಗಳ ಐಡಿ ಕಾರ್ಡ್​ಗೆ ಕೆಂಪು-ಹಳದಿ ಬಣ್ಣದ ಟ್ಯಾಗ್​ ಕಡ್ಡಾಯ

ಬೆಂಗಳೂರು: ಕರ್ನಾಟಕ ರಾಜ್ಯ ಉದಯವಾಗಿ 50 ವರ್ಷವಾದ ಹಿನ್ನೆಲೆಯಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವನ್ನು ಬಹಳಷ್ಟು ವಿಜೃಂಭಣೆಯಿಂದ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ನಾಡಿನಾದ್ಯಂತ ಕನ್ನಡ ಕಲರವ ಮನೆ-ಮನವನ್ನು ಮುಟ್ಟಿಸಲು ಮುಂದಾಗಿದೆ. ಇದರ ಭಾಗವೆಂಬಂತೆ ಅಧಿಕಾರಿಗಳು ಕಡ್ಡಾಯವಾಗಿ ಪಾಲಿಸಬೇಕಾದ ನಿಯಮವನ್ನು ಸರ್ಕಾರ ಜಾರಿಗೆ ತಂದಿದೆ. ಸರ್ಕಾರಿ ಅಧಿಕಾರಿಗಳು ಧರಿಸುವ ಗುರುತಿನ ಚೀಟಿ ಟ್ಯಾಗ್​ ನಾಡಧ್ವಜ ಬಣ್ಣದಲ್ಲೇ ಇರಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರಿ ಅಧಿಕಾರಿಗಳು ಕನ್ನಡ ರಾಜ್ಯೋತ್ಸವದೊಳಗೆ ಕಡ್ಡಾಯವಾಗಿ ಗುರುತಿನ ಚೀಟಿಗೆ ಕೆಂಪು-ಹಳದಿ ಬಣ್ಣದ ಟ್ಯಾಗ್​​ ಅನ್ನೇ​ ಧರಿಸಬೇಕು ಎಂದು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಡಿಪಿಎಆರ್ ಸೂಚನೆ ನೀಡಿದೆ.

ಐಟಿ ಕಂಪನಿಗಳ ಮೇಲೆ ಕನ್ನಡ ಬಾವುಟ ಕಡ್ಡಾಯ
ನವೆಂಬರ್ 1​ರಂದು ಎಲ್ಲ ಶಾಲೆ, ಕಾಲೇಜುಗಳು, ಕಾರ್ಖಾನೆಗಳು ಮತ್ತು ಐಟಿಬಿಟಿ ಕಚೇರಿಗಳ ಕಟ್ಟಡ ಮೇಲೆ ಕಡ್ಡಾಯವಾಗಿ ಕನ್ನಡ ಬಾವುಟ ಹಾರಿಸಲೇಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದರು.

Join Whatsapp
Exit mobile version