Home ಕರಾವಳಿ ಮಂಗಳೂರು : ಹವಾಮಾನ ಇಲಾಖೆಯಿಂದ ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಣೆ

ಮಂಗಳೂರು : ಹವಾಮಾನ ಇಲಾಖೆಯಿಂದ ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಣೆ

ಮಂಗಳೂರು : ಅರಬ್ಬೀ ಸಮುದ್ರದಲ್ಲಿ ತೌಖ್ತೆ ಚಂಡಮಾರುತ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆ ಹಾಗೂ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಿಸಿರುವ ಹವಾಮಾನ ಇಲಾಖೆ ಭಾರೀ ಗಾಳಿ ಮಳೆ ಸುರಿಯುವ ಸೂಚನೆ ನೀಡಿದೆ.  

ಕಡಲ ತಡಿಗೆ ದೈತ್ಯ ಅಲೆಗಳು ಅಪ್ಪಳಿಸುತ್ತಿದ್ದು, ಮಂಗಳೂರು ಹೊರವಲಯದ ಉಳ್ಳಾಲ,ಕೋಟೆಪುರ,ಸೋಮೇಶ್ವರ,ಕೈಕೊ ಪ್ರದೇಶದ ಜನರು ಕಡಲ ಕೊರೆತದ ಆತಂಕದಲ್ಲಿದ್ದಾರೆ.

ಎನ್ ಡಿ ಆರ್ ಎಫ್ ತಂಡ ವನ್ನು ಸನ್ನದ್ದ ಸ್ಥಿತಿಯಲ್ಲಿರಿಸಿರುವ ಜಿಲ್ಲಾಡಾಳಿತ, ತೀರ ಪ್ರದೇಶದಲ್ಲಿ ಎಚ್ಚರಿಕೆ ಯಿಂದ ಇರುವಂತೆ ಸೂಚನೆ ನೀಡಿದೆ.  

Join Whatsapp
Exit mobile version