Home ಟಾಪ್ ಸುದ್ದಿಗಳು ಸಹಾಯಕ ಪ್ರಾಧ್ಯಾಪಕರ ನೇಮಕಾತಿ| ಪಿಎಚ್.ಡಿ ಕಡ್ಡಾಯವಲ್ಲ: ಯುಜಿಸಿ

ಸಹಾಯಕ ಪ್ರಾಧ್ಯಾಪಕರ ನೇಮಕಾತಿ| ಪಿಎಚ್.ಡಿ ಕಡ್ಡಾಯವಲ್ಲ: ಯುಜಿಸಿ

ಬೆಂಗಳೂರು: ವಿಶ್ವವಿದ್ಯಾಲಯ ಹಾಗೂ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ನಿಗದಿ ಮಾಡಿದ್ದ ಪಿಎಚ್.ಡಿ ಕಡ್ಡಾಯ ನಿಯಮವನ್ನು ತೆಗೆದುಹಾಕಲು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮುಂದಾಗಿದೆ.

1956ರ ನಿಯಮಗಳಿಗೆ 2019-20ರಲ್ಲಿ ತಿದ್ದುಪಡಿ ತಂದಿದ್ದ ಯುಜಿಸಿ, ಉನ್ನತ ಶಿಕ್ಷಣದಲ್ಲಿ
ಗುಣಮಟ್ಟ ಹೆಚ್ಚಿಸಲು ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಪಿಎಚ್.ಡಿ ಕಡ್ಡಾಯಗೊಳಿಸಿತ್ತು. ಹೊಸ ನಿಯಮಗಳನ್ನು 2021ರ ಜುಲೈ 1ರಿಂದ ಜಾರಿಗೊಳಿಸಲು ಆದೇಶ ಹೊರಡಿಸಿತ್ತು. ಕೋವಿಡ್
ಕಾರಣದಿಂದ ಹಲವು ಅಭ್ಯರ್ಥಿಗಳ ಸಂಶೋಧನಾ ಕಾರ್ಯಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿರಲಿಲ್ಲ. ಹಾಗಾಗಿ, ನಿಯಮ
ಜಾರಿಯ ಅವಧಿಯನ್ನು 2023 ಜುಲೈ 1ರವರೆಗೆ ವಿಸ್ತರಿಸಿತ್ತು.

ಹಲವಾರು ವಿಷಯಗಳಲ್ಲಿ ಮಾರ್ಗದರ್ಶಕರಿಲ್ಲದೆ ವಿದ್ಯಾರ್ಥಿಗಳು ಸಂಶೋಧನೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಹಾಗಾಗಿ, ಪಿಎಚ್.ಡಿ ಕಡ್ಡಾಯ ಮರುಪರಿಶೀಲಿಸಬೇಕು ಎಂದು ಹಲವು ಮನವಿಗಳು ಯುಜಿಸಿಗೆ ಸಲ್ಲಿಕೆಯಾಗಿದ್ದವು.

ಮನವಿಗಳನ್ನು ಪರಿಗಣಿಸಿರುವ ಯುಜಿಸಿ, ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪಿಎಚ್.ಡಿ ಅರ್ಹತೆ ತೆಗೆದುಹಾಕುವ ಕುರಿತು ಸಮ್ಮತಿ ಸೂಚಿಸಿದೆ.

Join Whatsapp
Exit mobile version