Home ಟಾಪ್ ಸುದ್ದಿಗಳು ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯಲು ಸಿದ್ಧ : ಬಿ.ಸಿ ನಾಗೇಶ್

ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯಲು ಸಿದ್ಧ : ಬಿ.ಸಿ ನಾಗೇಶ್

ಬೆಂಗಳೂರು: ಶಿಕ್ಷಣ ತಜ್ಞರು ಕೇಸರಿ ಬಣ್ಣ ವಿದ್ಯಾರ್ಜನೆಗೆ ಪೂರಕವೆಂದು ಅಭಿಪ್ರಾಯ ಪಟ್ಟರೆ ಶಾಲಾ ಕೊಠಡಿಗಳಿಗೆ ಆ ಬಣ್ಣ ಹಚ್ಚಲು ಸಿದ್ಧ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ ಶಾಲಾ ಕೊಠಡಿಗಳ ವಿನ್ಯಾಸ, ಬಣ್ಣ ವಿಚಾರಗಳಿಗೆ ಕುರಿತಂತೆ ಇಲಾಖಾ ಹಂತದಲ್ಲಿ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದಿದ್ದಾರೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಈ ಬಗ್ಗೆ ತೀರ್ಮಾನದ ಸಂಪೂರ್ಣ ಅಧಿಕಾರ ನೀಡಲಾಗಿದೆ. ಒಂದು ವೇಳೆ ಶಿಕ್ಷಣ ತಜ್ಞರು ಕೇಸರಿ ಪೂರಕವೆಂದು ಅಭಿಪ್ರಾಯ ಪಟ್ಟರೆ ಬಣ್ಣ ಬಳಿಯಲು ಸರಕಾರ ಸಿದ್ಧ ಎಂದು ಅವರು ಹೇಳಿದ್ದಾರೆ.

ಹಿಜಾಬ್ ವಿಚಾರವನ್ನು ಇಟ್ಟುಕೊಂಡು ಕಾಂಗ್ರೆಸ್ ರಾಜಕೀಯ ಮಾಡಿದೆ. ಈಗ ಬಣ್ಣದ ಶಾಲಾ ಕೊಠಡಿಯ ವಿಚಾರದಲ್ಲೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

Join Whatsapp
Exit mobile version