Home ಟಾಪ್ ಸುದ್ದಿಗಳು NRIಗಳಿಗಾಗಿ ಪ್ರತ್ಯೇಕ ಇಲಾಖೆ ತೆರೆಯಲು ಸಿದ್ಧ: ಡಿಕೆ ಶಿವಕುಮಾರ್

NRIಗಳಿಗಾಗಿ ಪ್ರತ್ಯೇಕ ಇಲಾಖೆ ತೆರೆಯಲು ಸಿದ್ಧ: ಡಿಕೆ ಶಿವಕುಮಾರ್

ಬೆಂಗಳೂರು: ಎನ್ ಆರ್ ಐಗಳಿಗಾಗಿ ಒಂದು ಪ್ರತ್ಯೇಕ ಇಲಾಖೆ ತೆರೆಯಲು ನಾವು ಸಿದ್ಧರಾಗಿದ್ದೇವೆ. ಈ ಬಗ್ಗೆ ಎನ್ ಆರ್ ಐಗಳು ನಮಗೆ ಮನವಿ ಮಾಡಿದ್ದರು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.


ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ ತನ್ನದೆ ಆದ ಇತಿಹಾಸವಿದೆ. ರಾಜಕೀಯ ನಾಯಕರು, ಉದ್ಯಮದಾರರು ಬೆಂಗಳೂರು ಬೆಳೆಯಲು ಕಾರಣರಾಗಿದ್ದಾರೆ. ಸರ್ಕಾರ ನಿಮ್ಮ ಸೇವೆಯನ್ನು ಗೌರವಿಸುತ್ತೆ. ದೇಶದಲ್ಲಿ ಬೇರೆ ಬೇರೆ ಕಾನೂನು ಇದ್ದರೂ ಸಹ, ನಾವು ಉದ್ಯಮದಾರರು ಶಕ್ತಿಶಾಲಿಯಾಗಿರಬೇಕು ಎಂದರು.


ಕೇರಳದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲ್ಲ. ತಮಿಳುನಾಡಿನಲ್ಲಿ ಸ್ವಲ್ಪ ಅವಕಾಶ ಇದೆ. ಆಂಧ್ರಪ್ರದೇಶದಲ್ಲಿ ಈಗ ಕೈಗಾರಿಕೆ ಸ್ಥಾಪನೆ ಶುರುವಾಗಿದೆ. ನಮ್ಮಲ್ಲಿ ಹೂಡಿಕೆಗೆ ಮುಕ್ತವಾಗಿದೆ. ಉದ್ಯೋಗ ಸೃಷ್ಟಿ ಮಾಡಬೇಕು ಅನ್ನುವುದು ನಮ್ಮ ಉದ್ದೇಶ. ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಉದ್ಯೋಗ ಸೃಷ್ಟಿಗೆ ನೀವು ಆಲೋಚನೆ ಮಾಡಬೇಕು. ನಮ್ಮ ಹಳ್ಳಿ ಮಕ್ಕಳು ಬಹಳ ಬುದ್ದಿವಂತರಿದ್ದಾರೆ. ಆ ಭಾಗದ ಯುವಕರಿಗೆ ಉದ್ಯೋಗ ಸಿಗಲಿ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿ ಆಗಬೇಕು ಎಂದು ಹೇಳಿದರು.

Join Whatsapp
Exit mobile version