Home ಟಾಪ್ ಸುದ್ದಿಗಳು ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಪುತ್ರ ಅನಿಲ್‌ ವಿರುದ್ಧ ಪ್ರಚಾರಕ್ಕೆ ಸಿದ್ಧ: ಕೇರಳದ ಮಾಜಿ ಸಿಎಂ ಆಂಟನಿ

ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಪುತ್ರ ಅನಿಲ್‌ ವಿರುದ್ಧ ಪ್ರಚಾರಕ್ಕೆ ಸಿದ್ಧ: ಕೇರಳದ ಮಾಜಿ ಸಿಎಂ ಆಂಟನಿ

ತಿರುವನಂತಪುರ: ಬಿಜೆಪಿಯಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪುತ್ರ ಅನಿಲ್‌ ಆಯಂಟನಿ ವಿರುದ್ಧ ಪ್ರಚಾರಕ್ಕೆ ತನು ಸಿದ್ಧ ಎಂದು ಕೇರಳದ ಮಾಜಿ ಸಿಎಂ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಎಕೆ ಆಂಟನಿ ಹೇಳಿದ್ದಾರೆ.

ಮುಂಬರುವ ಚುನಾವಣೆಯು “ಮಾಡು ಇಲ್ಲವೇ ಮಡಿ’ ಹೋರಾಟವಾಗಿದ್ದು, ಭಾರತ ಎಂಬ ಪರಿಕಲ್ಪನೆ ಉಳಿಯಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲಿದೆ ಎಂದು ಅವರು ಹೇಳಿದ್ದಾರೆ.

ಹಾಗಾಗಿ ನಾನು ಇಳಿ ವಯಸ್ಸಲ್ಲೂ ಶಕ್ತಿ ಮೀರಿ ಹೋರಾಟ ಮಾಡುತ್ತಿದ್ದೇನೆ. ನನ್ನ ಆರೋಗ್ಯ ಪರಿಸ್ಥಿತಿ ಸಹಕರಿಸಿದರೆ ಕೇರಳದಲ್ಲಿ ಯುಡಿಎಫ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದೇನೆ. ಇದು ಪುತ್ರ ಅನಿಲ್‌ ಸ್ಪರ್ಧಿಸುತ್ತಿರುವ ಪತ್ತನಂತಿಟ್ಟ ಕ್ಷೇತ್ರಕ್ಕೂ ಅನ್ವಯಿಸಲಿದೆ. ಆತನ ವಿರುದ್ಧವೂ ಪ್ರಚಾರಕ್ಕೆ ಸಿದ್ಧನಿದ್ದೇನೆ ಎಂದು ಭಾರತದ ದೀರ್ಘ‌ಕಾಲದ ರಕ್ಷಣ ಸಚಿವರೂ ಆಗಿರುವ ಎಕೆ ಆಂಟನಿ ಹೇಳಿದ್ದಾರೆ.

ಕೇರಳ ಮಾಜಿ ಮುಖ್ಯಮಂತ್ರಿ ಎ.ಕೆ.ಆಂಟನಿ ಪುತ್ರ ಅನಿಲ್‌ ಕೆ.ಆಂಟನಿ ಕಳೆದ ವರ್ಷ ಬಿಜೆಪಿ ಸೇರಿದ್ದು, ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

Join Whatsapp
Exit mobile version