Home ಟಾಪ್ ಸುದ್ದಿಗಳು ಕಾಲೋನಿ ಯುವಕನ ಜೊತೆ ಸಪ್ತಪದಿ, ಮಿಸ್ ಕಾಲ್‌ ಕೊಟ್ಟವನ ಜೊತೆ ಎರಡನೇ ವಿವಾಹ, ಇನ್ಸ್ಟಾಗ್ರಾಮ್‌ ಗೆಳೆಯನೊಂದಿಗೆ...

ಕಾಲೋನಿ ಯುವಕನ ಜೊತೆ ಸಪ್ತಪದಿ, ಮಿಸ್ ಕಾಲ್‌ ಕೊಟ್ಟವನ ಜೊತೆ ಎರಡನೇ ವಿವಾಹ, ಇನ್ಸ್ಟಾಗ್ರಾಮ್‌ ಗೆಳೆಯನೊಂದಿಗೆ ಪರಾರಿ !

►► ನಾಗ್ಪುರದ ತ್ರಿಕೋನ ಪ್ರೇಮಕಥೆಯ ಫುಲ್ ಡಿಟೇಲ್ಸ್ ಇಲ್ಲಿದೆ ಓದಿ !

ನಾಗ್ಪುರ: ನಗರದಲ್ಲಿ ಅಚ್ಚರಿ ರೀತಿಯ ತ್ರಿಕೋನ ಪ್ರೇಮಕಥೆ ಸದ್ದು ಮಾಡಿದ್ದು, ಗ್ವಾಲಿಯರ್‌ನ ಯುವತಿಯ ಸುದ್ದಿ ಕೇಳಿ ಅನೇಕರು ದಂಗಾಗಿ ಹೋಗಿದ್ದಾರೆ. ಯುವತಿಯು ಮೊದಲ ಬಾರಿಗೆ ತನ್ನ ಕಾಲೋನಿಯಲ್ಲಿ ವಾಸಿಸುವ ಯುವಕನನ್ನು ಮದುವೆಯಾಗಿದ್ದಾಳೆ, ಎರಡನೇ ಬಾರಿಗೆ ಮಿಸ್‌ಕಾಲ್ ನಿಂದ ಪರಿಚಯವಾದ ಮತ್ತೊಬ್ಬನನ್ನು ಪ್ರೀತಿಸಿ ವರಿಸಿದ್ದಾಳೆ. ಈಗ ಮೂರನೇ ಬಾರಿಗೆ ಇನ್ಸ್ಟಾಗ್ರಾಮ್‌ನಲ್ಲಿ ಭೇಟಿಯಾಗಿ ಆತನನ್ನೂ ಪ್ರೀತಿಸಿ 2ನೇ ಗಂಡನನ್ನು ಬಿಟ್ಡು ಪರಾರಿಯಾಗಿದ್ದಾಳೆ.

ಗ್ವಾಲಿಯರ್‌ನ 18 ವರ್ಷದ ಯುವತಿ ವಠೋಡಾ ಪ್ರದೇಶದಲ್ಲಿ ವಾಸಿಸಲು ಬಂದಿದ್ದಾಳೆ. ಸಂಬಂಧಿಕರೊಂದಿಗೆ ವಾಸಿಸುತ್ತಿದ್ದಾಗ ಅಲ್ಲಿನ ನಿವಾಸಿಗಳಲ್ಲಿ ಒಬ್ಬರ ಪರಿಚಯವಾಗಿ ಪ್ರೀತಿಸುತ್ತಿದ್ದಳು. ನೋಂದಣಿ ಕಚೇರಿಯಲ್ಲಿ ವಿವಾಹವೂ ಆಗಿ ಹೊಸ ಬದುಕು ಕಟ್ಟಿಕೊಂಡಿದ್ದಾಳೆ. ಈ ಮದುವೆಗೆ ಸಾಕ್ಷಿ ಎಂಬಂತೆ ಒಂದು ಮಗು ಕೂಡಾ ಜನಿಸಿದೆ.


ಇದಾದ ನಂತರ ಈಕೆಯ ಮೊಬೈಲ್ಗೆ ಒಂದು ದಿನ ಮಿಸ್‌ಕಾಲ್‌ ಬಂದಿದೆ. ಆ ಮಿಸ್‌ಕಾಲ್ ಮಾಡಿದವನ ಹೆಸರು ಪವನ್‌. ಇದೇ ಮಿಸ್‌ ಕಾಲ್ ತರುವಾಯ ಪ್ರೇಮವಾಗಿ ಮಾರ್ಪಾಡಾಯಿತು. ಯುವಕ ಔರಂಗಾಬಾದ್‌ ಬಿಟ್ಟು ಈಕೆಗಾಗಿ ನೇರವಾಗಿ ನಾಗ್ಪುರಕ್ಕೆ ಬಂದಿಳಿದ. ಇಬ್ಬರೂ ಭೇಟಿಯಾದಾಗ ಯುವತಿ ತನಗೆ ಈಗಾಗಲೇ ವಿವಾಹವಾಗಿರುವ ಸಂಗತಿಯನ್ನು ಮುಚ್ಚಿಟ್ಟಿದ್ದಾಳೆ.
ಮನಸಾರೆ ಪ್ರೀತಿಸುತ್ತಿದ್ದ ಪವನ್ ಮದುವೆ ಬಗ್ಗೆ ಪ್ರಸ್ತಾಪಿಸಿ ಯುವತಿಯನ್ನು ಕೊನೆಗೂ ದೇವಸ್ಥಾನದಲ್ಲಿ ವಿವಾಹ ಮಾಡಿಕೊಂಡ. ನಂತರ ಇಬ್ಬರೂ ಸೋನೆಗಾಂವ್ ಪ್ರದೇಶದಲ್ಲಿ ವಾಸಿಸಲು ಪ್ರಾರಂಭಿಸಿದರು. ಇದರ ನಡುವೆ ನೊಂದು ಬೆಂದ ಮೊದಲ ಪತಿ ಮದ್ಯದ ಚಟಕ್ಕೆ ಬಿದ್ದಿದ್ದಾನೆ.

ಇನ್ನು ಎರಡನೇ ಪತಿ ಕೆಲಸಕ್ಕೆ ಹೋಗುತ್ತಿದ್ದ ಕಾರಣ ಯುವತಿ ಮನೆಯಲ್ಲಿ ಒಬ್ಬಳೇ ಇರುತ್ತಿದ್ದಳು. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣವನ್ನು ಹೆಚ್ಚು ಬಳಕೆ ಮಾಡುತ್ತಿದ್ದಳಂತೆ. ಅಲ್ಲಿ ಪರಿಚಯವಾದವನೇ ಮೂರನೇ ಸ್ನೇಹಿತ. ಇನ್‌ಸ್ಟಾಗ್ರಾಮ್‌ನಲ್ಲಿ ಈಕೆ ಮೂರನೇ ಪ್ರೇಮಕ್ಕೆ ಬಿದ್ದಳು. ಇದಾದ ನಂತರ ಆಕೆ ಆತನೊಂದಿಗೆ ಓಡಿಹೋಗಲು ನಿರ್ಧರಿಸಿದ್ದಾಳೆ. ಎರಡನೇ ಗಂಡನನ್ನು ಬಿಟ್ಟು ಮೂರನೇ ವ್ಯಕ್ತಿಯ ಜೊತೆಗೀಗ ಜೀವನ ಮಾಡುತ್ತಿದ್ದಾಳೆ. ಇಷ್ಟೆಲ್ಲಾ ನಡೆಯುತ್ತಿರುವಾಗಲೇ ಪವನ್ ಆಕೆಗಾಗಿ ಹುಡುಕಾಟ ಆರಂಭಿಸಿದ್ದಾನೆ. ಆಗ ಆತನಿಗೆ ಈಕೆಗೆ ಮೊದಲೇ ವಿವಾಹವಾಗಿ ಮೊದಲ ಪತಿಗೊಬ್ಬ ಮಗನೂ ಇದ್ದು, ಮೂರನೇ ಗಂಡನೊಂದಿಗೆ ವಾಸವಾಗಿರುವುದು ತಿಳಿಯಿತು. ಇದೆಲ್ಲಾ ರಂಪಾಟ ಆದ ಮೇಲೂ ಇಬ್ಬರೂ ಸೇರಿ ಆಕೆಗೆ ಕರೆ ಮಾಡಿ ಮಾತನಾಡಿದ್ದಾರೆ. ಆದರೆ, ಆಕೆ ಮಾತ್ರ ತಾನು ಮೂರನೇ ಪತಿಯೊಂದಿಗೆ ಇರುತ್ತೇನೆ ಎಂದು ಹೇಳಿದ್ದಾಳೆ. ಮೋಸ ಹೋದ ಇವರಿಬ್ಬರೂ ಈಗ ಸಹಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಇನ್ನೂ ಯಾವುದೇ ದೂರು ದಾಖಲಾಗಿಲ್ಲ.

Join Whatsapp
Exit mobile version