RCB ಕಪ್​ ಗೆಲ್ಲುವ ತನಕ ಸ್ಕೂಲ್​ಗೆ ಸೇರುವುದಿಲ್ಲ ಎಂದ ಪೋರ| ಹಾಗಾದರೆ ಈ ಜನ್ಮದಲ್ಲಿ ನೀನು ಶಾಲೆಗೆ ಹೋಗಲ್ಲ ಎಂದು ಕಾಲೆಳೆದ ನೆಟ್ಟಿಗರು!

Prasthutha|

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕೆಕೆಆರ್ ಹಾಗೂ ಆರ್​ಸಿಬಿ ನಡುವಿನ ಪಂದ್ಯದ ವೇಳೆ ಪುಟ್ಟ ಅಭಿಮಾನಿ ಆರ್​ಸಿಬಿ ಕಪ್ ಗೆಲ್ಲುವ ತನಕ ಶಾಲೆಗೆ ಸೇರಲ್ಲ ಎಂಬ ಪೋಸ್ಟರ್ ಹಿಡಿದುಕೊಂಡು ಪೋಸ್ ನೀಡಿದ್ದ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

- Advertisement -

‘ಕಪ್ ಗೆಲ್ಲುವವರೆಗೂ ಶಾಲೆಗೆ ಸೇರಲ್ಲ’ ಎಂದಿರುವ RCB ಅಭಿಮಾನಿಯ ಅಭಿಲಾಷೆಯನ್ನು ಟ್ರೋಲ್ ಮಾಡಿದ ನೆಟ್ಟಿಗರು, ‘ಹಾಗಾದರೆ ನೀನು ಈ ಜನ್ಮದಲ್ಲಿ ಶಾಲೆಗೆ ಹೋಗಲ್ಲ’ ಎಂದು ಕಾಲೆಳೆದಿದ್ದಾರೆ.

ಆರ್​ಸಿಬಿ ತನ್ನ ಮುಂದಿನ ಪಂದ್ಯವನ್ನು ಮೇ 1 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದ್ದು, ಈ ಪಂದವು ಲಕ್ನೋದ ಏಕಾನ ಸ್ಟೇಡಿಯಂನಲ್ಲಿ ನಡೆಯಲಿದೆ. ಆರ್‌ಸಿಬಿ ಈವರೆಗೆ ಆಡಿರುವ ಎಂಟು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಸಾಧಿಸಿದ್ದು, ಈ ಬಾರಿಯೂ ತಂಡದ ಸಾಧನೆ ನಿರಾಶಾದಾಯಕವಾಗಿದೆ.

Join Whatsapp