ಹೊಸದಿಲ್ಲಿ : ಭಾರತೀಯ ರಿಸರ್ವ್ ಬ್ಯಾಂಕ್ ನ ಕಾರ್ಯನಿರ್ವಾಹಕ ನಿರ್ದೇಶಕ (ಇ.ಡಿ)ಯಾಗಿ ಜೋಸ್ ಜೆ ಕಟ್ಟೂರ್ ಅವರು ನೇಮಕಗೊಂಡಿದ್ದಾರೆ.
ಇನ್ನು ಮುಂದೆ ಮಾನವ ಸಂಪನ್ಮೂಲ ನಿರ್ವಹಣಾ ಇಲಾಖೆ, ಕಾರ್ಪೊರೇಟ್ ಕಾರ್ಯತಂತ್ರ ಮತ್ತು ಬಜೆಟ್ ಇಲಾಖೆ ಮತ್ತು ರಾಜಭಾಷಾ ಇಲಾಖೆಯನ್ನು ಕಟ್ಟೂರ್ ಅವರು ನೋಡಿಕೊಳ್ಳಲಿದ್ದಾರೆ ಎಂದು RBI ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕಟ್ಟೂರ್ ಅವರು ಕಾರ್ಯನಿರ್ವಾಹಕ ನಿರ್ದೇಶಕರಾಗಿ ಬಡ್ತಿಗೊಳ್ಳುವ ಮೊದಲು, RBIನ ಬೆಂಗಳೂರು ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿದ್ದರು. ಅವರು ಮೂರು ದಶಕಗಳಿಂದ ಸಂವಹನ, ಮಾನವ ಸಂಪನ್ಮೂಲ ನಿರ್ವಹಣೆ, ಹಣಕಾಸು ಸೇರ್ಪಡೆ, ಮೇಲ್ವಿಚಾರಣೆ, ಕರೆನ್ಸಿ ನಿರ್ವಹಣೆ ಮತ್ತು ಭಾರತದ ಕೇಂದ್ರ ಬ್ಯಾಂಕ್ ನ ಇತರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ಕಟ್ಟೂರ್ ಅವರು ಇನ್ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್, ಆನಂದ್, ಗುಜರಾತ್ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಲಾ ಮತ್ತು ಪೆನ್ಸಿಲ್ವೇನಿಯಾದ ವಾರ್ಟನ್ ಸ್ಕೂಲ್ ಆಫ್ ಬಿಸಿನೆಸ್ ನಿಂದ ಅಡ್ವಾನ್ಸ್ಡ್ ಮ್ಯಾನೇಜ್ಮೆಂಟ್ ಪ್ರೋಗ್ರಾಂ (ಎಎಂಪಿ) ನಿಂದ ಸ್ನಾತಕೋತ್ತರ ಅರ್ಹತೆಯನ್ನು ಹೊಂದಿದ್ದಾರೆ. ಇದಲ್ಲದೆ, ಕಟ್ಟೂರ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಅಂಡ್ ಫೈನಾನ್ಸ್ (ಸಿಎಐಐಬಿ) ನ ಸರ್ಟಿಫೈಡ್ ಅಸೋಸಿಯೇಟ್ ಸೇರಿದಂತೆ ವೃತ್ತಿಪರ ಅರ್ಹತೆಗಳನ್ನು ಗಳಿಸಿದ್ದಾರೆ.