ಮುಂಬೈ ಪೊಲೀಸರ ಕಸ್ಟಡಿಗೆ ಭೂಗತ ಪಾತಕಿ ರವಿ ಪೂಜಾರಿ ಹಸ್ತಾಂತರ

Prasthutha|

ಬೆಂಗಳೂರು : ಭೂಗತ ಪಾತಕಿ ರವಿ ಪೂಜಾರಿಯನ್ನು ಮುಂಬೈ ಪೊಲೀಸರು ಕೊನೆಗೂ ಕಸ್ಟಡಿಗೆ ಪಡೆದಿದ್ದಾರೆ. ಸತತ ಪ್ರಯತ್ನಗಳ ಬಳಿಕ, ಇದೀಗ ರವಿ ಪೂಜಾರಿ ವಿಚಾರಣೆಗೆ ಮುಂಬೈ ಪೊಲೀಸರಿಗೆ ಅನುಮತಿ ಸಿಕ್ಕಿದೆ.

- Advertisement -

ಬೆಂಗಳೂರು ವಿಶೇಷ ನ್ಯಾಯಾಲಯ, ರವಿ ಪೂಜಾರಿಯನ್ನು ಮಾ.9ರ ವರೆಗೆ ಮುಂಬೈ ಪೊಲೀಸರ ಕಸ್ಟಡಿಗೆ ನೀಡಿದೆ. 2016, ಅ.21ರಂದು ಮುಂಬೈನ ವಿಲೆ ಪಾರ್ಲೆ ಏರಿಯಾದಲ್ಲಿ ನಡೆದಿದ್ದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ರವಿ ಪೂಜಾರಿಯನ್ನು ಕಸ್ಟಡಿಗೆ ಪಡೆದಿದ್ದಾರೆ.

ಈ ಪ್ರಕರಣದಲ್ಲಿ ರವಿ ಪೂಜಾರಿಯ ಏಳು ಮಂದಿ ಸಹಚರರು ಈಗಾಗಲೇ ಜೈಲಿನಲ್ಲಿದ್ದಾರೆ. ಮಂಗಳವಾರ ಬೆಳಗ್ಗೆ ಪಾತಕಿಯನ್ನು ಬೆಂಗಳೂರಿನಿಂದ ರಸ್ತೆ ಮೂಲಕ ಮುಂಬೈಗೆ ಕರೆ ತರಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

ಕರ್ನಾಟಕದ ಉಡುಪಿ ಮೂಲದ ರವಿ ಪೂಜಾರಿ ವಿರುದ್ಧ 49ಕ್ಕೂ ಹೆಚ್ಚು ಪ್ರಕರಣಗಳಿವೆ. ಹಲವು ವರ್ಷಗಳಿಂದ ವಿದೇಶದಲ್ಲಿ ಬಚ್ಚಿಟ್ಟುಕೊಂಡಿದ್ದ ರವಿ ಪೂಜಾರಿಯನ್ನು ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಕರೆ ತರಲಾಗಿತ್ತು. ನಂತರ ಬೆಂಗಳೂರಿನ ಜೈಲಿನಲ್ಲಿ ಇರಿಸಲಾಗಿತ್ತು.

Join Whatsapp