ಅತ್ಯಾಚಾರ ನಡೆಸಿದ ಅಪರಾಧಿಗೆ 9 ದಿನಗಳಲ್ಲೇ ಶಿಕ್ಷೆ ಪ್ರಕಟಿಸಿದ ಜೈಪುರ ನ್ಯಾಯಾಲಯ

Prasthutha|

ಜೈಪುರ: ಅತ್ಯಾಚಾರ ನಡೆದು 9 ದಿನಗಳಲ್ಲೇ ಜೈಪುರ ನ್ಯಾಯಾಲಯವು 25 ವರ್ಷದ ಕಮಲೇಶ್ ಮೀನಾಗೆ 20 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿದೆ. 9 ವರ್ಷದ ಬಾಲಕಿಯ ಮೇಲೆ ಹೀನವಾಗಿ ಅತ್ಯಾಚಾರವೆಸಗಿದ್ದ ಆರೋಪಿಗೆ ಕೇವಲ 9 ದಿನಗಳಲ್ಲಿ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿರುವುದು ವಿಶೇಷ.

- Advertisement -

ಅಲ್ಲದೇ ಶಿಕ್ಷೆಯೊಂದಿಗೆ 2 ಲಕ್ಷ ದಂಡ ವಿಧಿಸಿರುವ ನ್ಯಾಯಾಲಯವು, ಪ್ರಕರಣವನ್ನು ಕೋರ್ಟ್‌ಗೆ ಒಯ್ದ ಐದು ‘ಕರ್ತವ್ಯ ದಿನ’ಗಳ ಅವಧಿಯಲ್ಲಿ ತೀರ್ಪು ಪ್ರಕಟವಾಗಿದೆ ಮತ್ತು ಜೈಪುರ ಮೆಟ್ರೊಪಾಲಿಟನ್‌ ಪೋಕ್ಸೊ ನ್ಯಾಯಾಲಯವು ಅತ್ಯಂತ ಕಡಿಮೆ ಅವಧಿಯಲ್ಲಿ ತೀರ್ಪು ಪ್ರಕಟಿಸಿದೆ ಎಂದು ಉಪ ಪೊಲೀಸ್ ಆಯುಕ್ತ ಹರೇಂದ್ರ ಕುಮಾರ್ ಹೇಳಿದ್ದಾರೆ.ಇದೇ ಸೆಪ್ಟೆಂಬರ್‌ 26ರಂದು ಅಪರಾಧಿಯು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ.

ಘಟನೆಯ ಮರುದಿನವೇ ಮುಂಜಾನೆಯ ವೇಳೆ ಆರೋಪಿಯನ್ನು ಬಂಧಿಸಲಾಗಿತ್ತು. ‘ಪೋಕ್ಸೊ’ ಮತ್ತು ಐಪಿಸಿ ಕಾಯ್ದೆ ಅಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು. ಪ್ರಕರಣ ದಾಖಲಿಸಲ್ಪಟ್ಟ 18 ಗಂಟೆಗಳಲ್ಲಿ ಅಪರಾಧಿಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಯಿತು. ನ್ಯಾಯಾಲಯವು ಐದು ‘ಕರ್ತ್ಯವ್ಯ ದಿನ’ಗಳಲ್ಲೇ ವಿಚಾರಣೆಯನ್ನು ಪೂರ್ಣಗೊಳಿಸಿದೆ. ಇಂದು ತೀರ್ಪು ಪ್ರಕಟವಾಗಿದೆ ಎಂದು ಇದೇ ಸಂದರ್ಭದಲ್ಲಿ ಹರೇಂದ್ರ ಕುಮಾರ್ ತಿಳಿಸಿದ್ದಾರೆ.

Join Whatsapp