ಉತ್ತರ ಪ್ರದೇಶ | 10 ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ, ವಿಷಪ್ರಾಶಣ ಮಾಡಿ ಕೊಲೆ ಮಾಡಿದ ಕಿರಾತಕರು !

Prasthutha|

ಲಕ್ನೋ: ಶಾಲೆಯಿಂದ ತರಗತಿ ಮುಗಿಸಿ ಮನೆಗೆ ತೆರಳುತ್ತಿದ್ದ 10ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ನಾಲ್ಕು ಜನ ಕಾಮುಕರು ಸೇರಿ ಸಾಮೂಹಿಕ ಅತ್ಯಾಚಾರ ಮಾಡಿರುವ ಹೇಯ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ. ವಿದ್ಯಾರ್ಥಿನಿ ಟ್ಯೂಷನ್ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ಕಾಮುಕರು ವಿದ್ಯಾರ್ಥಿಯನ್ನು ಅಪಹರಿಸಿ, ಆಕೆಗೆ ವಿಷ ಕುಡಿಸಿ ಹತ್ಯೆಗೈಯ್ಯಲು ಯತ್ನಿಸಿರುವ ಭಯಾನಕ ಘಟನೆ ಮೀರತ್ ನಲ್ಲಿ ನಡೆದಿದೆ.

ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕಿ ನರಳಾಡುತ್ತಲೇ ಮನೆಗೆ ತಲುಪಿ ಪೋಷಕರ ಬಳಿ ನಡೆದ ಘಟನೆ ವಿವರಿಸಿದ್ದಾಳೆ‌. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಬಾಲಕಿ ಮಾರ್ಗ ಮಧ್ಯೆ ಪ್ರಾಣ ಬಿಟ್ಟಿದ್ದಾಳೆ.

- Advertisement -

ಯುವತಿ ನೀಡಿದ್ದ ಮಾಹಿತಿಯಂತೆ, ಪ್ರಕರಣ ದಾಖಲಿಸಿ ಪಕ್ಕದ ಹಳ್ಳಿಯ ನಿವಾಸಿಗಳಾದ ಸಂಜಯ್ ಎಂಬುವವರ ಮಗ ಲಖನ್ ಮತ್ತು ಬಲವಂತ್ ಅಲಿಯಾಸ್ ಮುರಳಿ ಎನ್ನುವವರ ಮಗ ವಿಕಾಸ್ ಮತ್ತು ಲಖನ್, ವಿಕಾಸ್ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -