Home ಟಾಪ್ ಸುದ್ದಿಗಳು ಮಹಿಳೆಯ ಅತ್ಯಾಚಾರ: ಹಿಂದು ಯುವವಾಹಿನಿ ಮುಖಂಡನ ವಿರುದ್ಧ ದೂರು

ಮಹಿಳೆಯ ಅತ್ಯಾಚಾರ: ಹಿಂದು ಯುವವಾಹಿನಿ ಮುಖಂಡನ ವಿರುದ್ಧ ದೂರು

ಲಕ್ನೋ, ಜುಲೈ 31: ಉತ್ತರ ಪ್ರದೇಶದ ಮೀರತ್ ಎಂಬಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಿಂದು ಯುವವಾಹಿನಿಯ ನಾಯಕ ಮತ್ತು ಮಹಿಳಾ ಸಂಘಟನೆಯ ನಾಯಕಿಯ ಮಗನ ವಿರುದ್ಧ ದೂರು ದಾಖಲಾಗಿದೆ. ಈ ಮಹಿಳಾ ನಾಯಕಿ ಆರೋಪಿಗಳಿಗೆ ನೆರವು ನೀಡುತ್ತಿದ್ದಳು ಎಂದು ಸಂತ್ರಸ್ತೆ ಯುವತಿ ಆರೋಪಿಸಿದ್ದಾಳೆ.

ಜುಲೈ 15 ರಂದು ನಡೆದ ಈ ಘಟನೆ ಆರೋಪಿಗಳು ಸಂತ್ರಸ್ತೆಗೆ ತೀವ್ರ ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಜುಲೈ 28 ರಂದು ದೂರು ನೀಡಿದ್ದಾಳೆ. ಅರೋಪಿಗಳು ಆಕೆಯ ಅತ್ಯಾಚಾರದ ವಿಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದರು. ಈ ಸಂಬಂಧ ಇದುವರೆಗೂ ಯಾರನ್ನೂ ಬಂದಿಸಿಲ್ಲವೆಂದು ಪಲ್ಲವಪುರಮ್ ಪೊಲೀಸ್ ಅಧಿಕಾರಿಗಳು ಶುಕ್ರವಾರ ತಡರಾತ್ರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

24 ಪ್ರಾಯದ ಸಂತ್ರಸ್ತೆ ಯುವತಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಉತ್ತರ ಪ್ರದೇಶದ ಬರೇಲಿ ನಿವಾಸಿಯಾಗಿದ್ದಾಳೆ. ಪಲ್ಲವಪುರಮ್ ಗ್ರಾಮದ ದುಲ್ಹೇಡದ ಚೌಹಾಣ್ ನಿವಾಸಿ ಮೀನಾಕ್ಷಿ ಚೌಹಾಣ್ ಅವರ ಅನಿಕೇತ್ ಚೌಹಾಣ್ ಮತ್ತು ಅಜಯ್ ಚೌಹಾಣ್ ಆರೋಪಿಗಳಾಗಿದ್ದಾರೆ.


ಆರೋಪಿಗಳ ವಿರುದ್ಧ ಫೋಕ್ಸೊ ಸೇರಿದಂತೆ ಭಾರತೀಯ ದಂಡ ಸಂಹಿತೆಯ ಇತರ ಸೆಕ್ಷಣ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಗೆ ಮತ್ತು ಬರಿಸುವ ಔಷಧ ಮಿಶ್ರಿತ ಪಾನೀಯ ನೀಡಿ ಅತ್ಯಾಚಾರ ನಡೆಸಲಾಗಿದೆ ಮತ್ತು ಅತ್ಯಾಚಾರದ ವಿಡಿಯೋ ಚಿತ್ರೀಕರಣ ಮಾಡಲಾಗಿದೆಯೆಂದು ಸಂತ್ರಸ್ತೆ ತನ್ನ ದೂರಿನಲ್ಲಿ ನಮೂದಿಸಿದ್ದಾಳೆ. ಅತ್ಯಾಚಾರದ ನಂತರ ಬೆಂಕಿ ಹಚ್ಚಿ ಕೊಲೆಮಾಡುವ ಬೆದರಿಕೆ ಒಡ್ದಲಾಗಿತ್ತು ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾಳೆಂದು ಮೀರತ್ ನ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

Join Whatsapp
Exit mobile version