Home ಟಾಪ್ ಸುದ್ದಿಗಳು ಸಂತ್ರಸ್ತೆಯನ್ನು ವಿವಾಹವಾದರೂ ಅತ್ಯಾಚಾರದ ಕೇಸ್ ರದ್ದಾಗುವುದಿಲ್ಲ: ಹೈಕೋರ್ಟ್

ಸಂತ್ರಸ್ತೆಯನ್ನು ವಿವಾಹವಾದರೂ ಅತ್ಯಾಚಾರದ ಕೇಸ್ ರದ್ದಾಗುವುದಿಲ್ಲ: ಹೈಕೋರ್ಟ್

ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಸಂತ್ರಸ್ತೆಯನ್ನು ಮದುವೆಯಾಗಿದ್ದಾನೆ ಎಂಬ ಕಾರಣಕ್ಕೆ ಆಪಾದಿತನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣವನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.


‘ಅತ್ಯಾಚಾರ ಆರೋಪದ ಸಂತ್ರಸ್ತೆಯನ್ನು ನಾನೀಗ ಮದುವೆಯಾಗಿದ್ದೇನೆ. ಆದರೆ ವಿಜಯಪುರ ಸೆಷನ್ಸ್ ನ್ಯಾಯಾಲಯದಲ್ಲಿ ನನ್ನ ವಿರುದ್ಧದ ಅತ್ಯಾಚಾರದ ಆರೋಪ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಅದನ್ನು ರದ್ದುಮಾಡಬೇಕು ಎಂದು ಕೋರಿ ಆರೋಪಿ ಹಾಗೂ ಸಂತ್ರಸ್ತೆ ಜಂಟಿಯಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ಪೀಠ, ಅರ್ಜಿಯನ್ನು ವಜಾಗೊಳಿಸಿದೆ.


ಘಟನೆ ನಡೆದ ಸಂದರ್ಭದಲ್ಲಿ ಸಂತ್ರಸ್ತೆಗೆ 19 ವರ್ಷ ಪ್ರಾಯವಾಗಿತ್ತು. ಆ ಬಳಿಕ ನಾವಿಬ್ಬರೂ ಮದುವೆಯಾಗಿದ್ದೇವೆ. ಹೀಗಾಗಿ ಪ್ರಕರಣವನ್ನು ರದ್ದುಮಾಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು. ಆದರೆ ಈ ವಾದವನ್ನು ತಿರಸ್ಕರಿಸಿದ ನ್ಯಾಯಪೀಠ, ಘಟನೆ ನಡೆದ ಸಂದರ್ಭದಲ್ಲಿ ಸಂತ್ರಸ್ತೆ ಅಪ್ರಾಪ್ತೆಯೋ ಅಥವಾ ವಯಸ್ಕಳೋ ಎಂಬುದನ್ನು ವಿಚಾರಾಣಾ ನ್ಯಾಯಾಲಯವೇ ನಿರ್ಧರಿಸಲಿದೆ. ಅತ್ಯಾಚಾರ ಹಾಗೂ ಪೋಕ್ಸೋ ಪ್ರಕರಣಗಳಲ್ಲಿ IPC ಕಲಂ 482 ಅನ್ನು ಬಳಸಿ ಪ್ರಕರವನ್ನು ರದ್ದುಪಡಿಸುವುದು ಸರಿಯಲ್ಲ ಎಂದ ನ್ಯಾಯಾಪೀಠ ಅಭಿಪ್ರಾಯಪಟ್ಟಿದೆ.

Join Whatsapp
Exit mobile version