ಉತ್ತರ ಪ್ರದೇಶ ಬಲ್ಲಿಯಾದ ರಸ್ದಾ ಎಂಬ ಗ್ರಾಮದಲ್ಲಿ 16 ವರ್ಷ ಪ್ರಾಯದ ಬಾಲಕಿಯ ಮೇಲೆ ಇಬ್ಬರು ಯುವಕರು ಅತ್ಯಾಚಾರವೆಸಗಿರುವ ಘಟನೆ ನಡೆದಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.
ಮೇ 29ರಂದು ಬಾಲಕಿ ಶೌಚಕ್ಕೆಂದು ಮನೆ ಸಮೀಪದ ಖಾಲಿ ಪ್ರದೇಶಕ್ಕೆ ಹೋಗಿದ್ದಾಗ ರಾಜೇಶ್ ಯಾದವ್ ಮತ್ತು ಆಕಾಶ್ ಯಾದವ್ ಎಂಬಿಬ್ಬರು ಆರೋಪಿಗಳು ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ ಎಂದು ರಸ್ಸಾ ಪೊಲೀಸ್ ಅಧಿಕಾರಿ ನಾಗೇಶ್ ಉಪಾಧ್ಯಾಯ ತಿಳಿಸಿದ್ದಾರೆ.
ಬಾಲಕಿಯ ದೂರಿನ ಮೇರೆಗೆ ಐಪಿಸಿ ಮತ್ತು ಪೊಕ್ಸೊ ಕಾಯ್ದೆಗಳಡಿಯಲ್ಲಿ ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.