ರಾಣಿ ಕಮಲಾಪತಿ ಮದುವೆಯಾಗಿದ್ದುದು ಮುಸ್ಲಿಮನನ್ನು, ಚರಿತ್ರೆ ಬಿಜೆಪಿಗೇನು ಗೊತ್ತು?: ಸಂಸದ ರಾಜಮಣಿ ಪಟೇಲ್

Prasthutha|

ನವದೆಹಲಿ: ಬಿಜೆಪಿ ಸರಕಾರವು ಮಧ್ಯಪ್ರದೇಶದಲ್ಲಿ ರೈಲು ನಿಲ್ದಾಣವೊಂದರ ಹೆಸರನ್ನು ಬದಲಿಸಿ ಗೊಂಡ ನಾಯಕಿ ರಾಣಿ ಕಮಲಾಪತಿ ಹೆಸರನ್ನು ಇತ್ತೀಚೆಗೆ ಮರುನಾಮಕರಣ ಮಾಡಿದೆ. ಆದರೆ ರಾಣಿ ಕಮಲಾಪತಿ ಮದುವೆಯಾಗಿದ್ದುದು ಓರ್ವ ಮುಸ್ಲಿಮನನ್ನು ಎಂದು ರಾಜ್ಯಸಭಾ ಸದಸ್ಯ ಕಾಂಗ್ರೆಸ್ಸಿನ ರಾಜಮಣಿ ಪಟೇಲ್ ಹೇಳಿದ್ದಾರೆ.

- Advertisement -


ಕಳೆದ ತಿಂಗಳು ಬಿಜೆಪಿ ಸರಕಾರವು ಹಬೀಬ್ ಗಂಜ್ ರೈಲು ನಿಲ್ದಾಣದ ಹೆಸರನ್ನು ರಾಣಿ ಕಮಲಾಪತಿ ನಿಲ್ದಾಣ ಎಂದು ಹೆಸರು ಬದಲಿಸಿತ್ತು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಆಗ ಭೋಪಾಲದ ಕೊನೆಯ ಹಿಂದೂ ರಾಣಿ, ಗೊಂಡ ರಮಣಿ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದ್ದರು.


ಆದರೆ ಪತ್ರಕರ್ತರ ಜೊತೆ ಮಾತನಾಡಿದ ರಾಜಮಣಿ ಪಟೇಲ್, ಈ ಬುಡಕಟ್ಟು ರಾಣಿಯು ಇತರರ ಮೇಲೆ ದಾಳಿ ಮಾಡುವುದಕ್ಕಾಗಿ ಒಬ್ಬ ಮುಸ್ಲಿಂ ಕಮಾಂಡರನ ಸಹಾಯ ಯಾಚಿಸಿದಳು. ಅದು ಅವರಿಬ್ಬರ ಪ್ರೇಮಕ್ಕೆ ಕಾರಣವಾಯಿತು. ಅಂತಿಮವಾಗಿ ಕೆಲವು ಆಚಾರಗಳ ಕಾರಣಕ್ಕೆ ಪ್ರೇಮ ಬಿಟ್ಟು ಜಲಸಮಾಧಿ ಆದಳು ಎಂದು ತಿಳಿಸಿದರು.

- Advertisement -


“ಭೋಪಾಲ್ ನಲ್ಲಿ ಬದಲಾಯಿಸಿರುವ ಹೆಸರು ಜನರನ್ನು ತಪ್ಪು ದಾರಿಗೆಳೆಯುವುದಾಗಿದೆ. ಜನಸಾಮಾನ್ಯರಿಗೆ ಕಮಲಾಪತಿ ಅರಸಿ ಯಾರು ಎಂದು ಗೊತ್ತಿಲ್ಲ. ಆಕೆ ಬುಡಕಟ್ಟು ಸರಿ? ಆಕೆ ಯಾರನ್ನು ಮದುವೆಯಾಗಿದ್ದಳು? ಆಕೆ ಮುಸ್ಲಿಮನೊಬ್ಬನನ್ನು ಮದುವೆಯಾಗಿದ್ದಳು. ಕಮಲಾಪತಿ ಹಿಂದೂವೇ ಅಥವಾ ಮುಸ್ಲಿಮಳೇ ಎಂದು ಈಗ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿ ಪಟೇಲ್ ಹೇಳಿದರು.
ಬಿಜೆಪಿಯು ಮತ ರಾಜಕೀಯಕ್ಕಾಗಿ ಚರಿತ್ರೆ ತಿರುಚುವ ಕೆಲಸ ಮಾಡುತ್ತಿದೆ ಹಾಗೂ ಹಿಂದೂ ಮುಸ್ಲಿಮರನ್ನು ಒಡೆದು ಸಮಾಜವನ್ನು ಮುರಿಯುತ್ತಿದೆ ಎಂದು ಸಹ ಪಟೇಲ್ ಆರೋಪಿಸಿದರು.
“ನೀವೆಲ್ಲರೂ ತಿಳಿದಿರುವ ಸಂಗತಿಯೇ ಆಗಿದೆ, ರಾಜ ಮಹಾರಾಜರ, ರಾಣಿಯರ ನಡತೆ ಎಂತಹದ್ದು ಎಂಬುದು. ಈ ರಾಜ ಮಹಾರಾಜರೆಲ್ಲ ದೇಶಕ್ಕೆ ಏನು ಮಾಡಿದರು ಎಂಬುದರ ಬಗ್ಗೆ ನಾನು ಹೇಳಲು ಹೋಗುವುದಿಲ್ಲ.” ಪಟೇಲ್ ವಿವರಿಸಿದರು.


ರಾಣಿ ಕಮಲಾಪತಿ ಮದುವೆಯಿಂದಾಗಿ ಒಬ್ಬ ಮುಸ್ಲಿಂ ಆಗಿರುವುದರಿಂದ ಬಿಜೆಪಿ ನಾಯಕರ ಮಕ್ಕಳು ಕೂಡ ಮುಸ್ಲಿಂ ಯುವಕ ಯುವತಿಯರನ್ನು ಮದುವೆಯಾಗಲಿ ಎಂದೂ ಪಟೇಲ್ ಹೇಳಿದರು.
ರಾಣಿ ಕಮಲಾಪತಿಯ ರಾಜ್ಯವನ್ನು ಅಫಘಾನಿಸ್ತಾನದ ಕಮಾಂಡರ್ ದೋಸ್ತ್ ಮುಹಮ್ಮದ್ ವಂಚನೆಯಿಂದ ವಶಪಡಿಸಿಕೊಂಡಿದ್ದ ಎಂದು ತಿಂಗಳ ಹಿಂದೆ ಚೌಹಾಣರು ಹೇಳಿಕೆ ನೀಡಿದ್ದರು.
“ಗೆಲುವು ಸಾಧ್ಯವಿಲ್ಲ ಎಂದು ತಿಳಿದಾಗ ತನ್ನ ಗೌರವ ಉಳಿಸಿಕೊಳ್ಳಲು ಜಲ್ ಜೌಹರ್ ಎಂಬ ಜಲಸಮಾಧಿ ಮೂಲಕ ಆಕೆ ಆತ್ಮಹತ್ಯೆ ಮಾಡಿಕೊಂಡಳು” ಎಂದು ಅವರು ಹೇಳಿದರು.


ಆಕೆಯ ಮಗ ನವಲ್ ಶಾ ಆದದ್ದು ಹೇಗೆ, ಆತ ಭೋಪಾಲಿನ ಲಾಲ್ ಗತಿ ಪ್ರದೇಶದಲ್ಲಿ ಕೊಲ್ಲಲ್ಪಟ್ಟ!
ಹಬೀಬ್ ಗಂಜ್ ರೈಲು ನಿಲ್ದಾಣದ ಹೆಸರನ್ನು ರಾಣಿ ಕಮಲಾಪತಿ ನಿಲ್ದಾಣ ಎಂದು ಬದಲಾಯಿಸುವುದಕ್ಕೆ ಮೊದಲು ಮಧ್ಯಪ್ರದೇಶ ಸರಕಾರವು ಕೇಂದ್ರ ಸರಕಾರಕ್ಕೆ ಬರೆದ ಕಾಗದದಲ್ಲಿ ರಾಣಿ ಕಮಲಾಪತಿಯು ಗಿನ್ನೋರ್ ಗಡದ ರಾಜ ಸೂರಜ್ ಸಿಂಗ್ ಶಾನ ಮಗ ನಿಜಾಂ ಶಾನನ್ನು ಮದುವೆಯಾಗಿದ್ದಳು ಎಂದು ತಿಳಿಸಿತ್ತು.ಪ್ರಧಾನಿ ಮೋದಿಯವರು, ಹೆಸರು ಬದಲಿಸಿದ ರಾಣಿ ಕಮಲಾಪತಿ ರೈಲು ನಿಲ್ದಾಣವನ್ನು ನವೆಂಬರ್ 15ರಂದು ಉದ್ಘಾಟಿಸಿದ್ದರು.

Join Whatsapp