ಹಾವೇರಿ: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿ ಭಾರೀ ಮಳೆ ಸುರಿದು ಮನೆಗಳಿಗೆ ನೀರು ನುಗ್ಗಿದ್ದು, ನೆರವಿಗೆ SDPI ಕಾರ್ಯಕರ್ತರು ಧಾವಿಸಿ ಅಗತ್ಯ ಸೌಲಭ್ಯವನ್ನು ಒದಗಿಸಿಕೊಟ್ಟಿದ್ದಾರೆ.
ತಡರಾತ್ರಿ ಸುರಿದ ಮಳೆಗೆ ಮನೆಗಳು ಸಂಪೂರ್ಣ ಜಲಾವೃತಗೊಂಡು ಜನ ತಮ್ಮ ಮನೆಗಳಲ್ಲಿ ಸಿಕ್ಕಿಹಾಕಿಕೊಂಡರು ಹಾಗೂ ರಸ್ತೆಗಳಲ್ಲಿ ನೀರು ಹರಿದ ಪರಿಣಾಮ ನಗರದಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.
16ನೇ ವಾರ್ಡಿನ ಸಿದ್ಧೇಶ್ವರ ನಗರವು ಬಹಳಷ್ಟು ಹಾನಿಗೊಳಗಾಯಿತು. ಇಲ್ಲಿ 20 ರಿಂದ 25 ಮನೆಗಳು ಮುಳುಗಡೆಯಾಗಿದ್ದವು. ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಜನರು ತಕ್ಷಣದಲ್ಲಿಯೇ ಸುರಕ್ಷಿತ ಸ್ಥಳ ಹುಡುಕಲಾಗದೇ ತೊಂದರೆಗೆ ಸಿಲುಕಿದರು. ಉಳಿದ ಹಲವಾರು ಪ್ರದೇಶಗಳ ಪರಿಸ್ಥಿತಿ ಸುಧಾರಿತವಾಗಿರಲಿಲ್ಲ. 27ನೇ ವಾರ್ಡಿನ ಎಕೆಜಿ ಕಾಲೋನಿಯಲ್ಲಿ 3-5 ಮನೆಗಳು ನೀರು ತುಂಬಿದ್ದು, 12ನೇ ವಾರ್ಡಿನ ಖಾತೀಬ್ ಗಲ್ಲಿಯಲ್ಲಿ ಮತ್ತು 13ನೇ ವಾರ್ಡಿನ ಓಲ್ಡ್ ಕಾರ್ ಸ್ಟ್ಯಾಂಡ್ ನಲ್ಲಿ 3-5 ಮನೆಗಳಿಗೆ ನೀರು ನುಗ್ಗಿತ್ತು. 17ನೇ ವಾರ್ಡಿನ ಮೃತ್ಯುಂಜಯ ನಗರದಲ್ಲಿ 20-25 ಮನೆಗಳು ಮುಳುಗಡೆಯಾಗಿ ಅತ್ಯಂತ ಹಾನಿಗೊಳಗಾದ ಸ್ಥಳಗಳಲ್ಲಿ ಒಂದಾಗಿ ಪರಿಣಮಿಸಿತು.
ಇಂತಹ ಸಂಕಷ್ಟಮಯ ಪರಿಸ್ಥಿತಿಯಲ್ಲಿ ಸ್ಥಳೀಯ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಸಮಯೋಚಿತ ಸ್ಪಂದನೆ ಇಂಗಿತವಾಗದಿದ್ದರಿಂದ ಪರಿಸ್ಥಿತಿ ಇನ್ನಷ್ಟು ಕಠಿಣಗೊಂಡಿತು. ಮಳೆಯ ನೀರು ರಸ್ತೆಗಳಲ್ಲೆಲ್ಲ ಹರಿಯುತ್ತಿದ್ದ ಪರಿಣಾಮ ಜನರು ತಮ್ಮ ಮನೆಗಳನ್ನು ಬಿಟ್ಟು ಬೇರೆಡೆಗೆ ಹೊರಡುವಂತಿಲ್ಲದಂತಾಯಿತು. ಸಹಾಯಕ್ಕಾಗಿ ಯಾರಾದರೂ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಜನರು ಆತಂಕದಲ್ಲಿ ಮುಳುಗಿದ್ದರು. ಆದರೆ ಅಧಿಕಾರಿಗಳಿಂದ ಅಥವಾ ಜನಪ್ರತಿನಿಧಿಗಳಿಂದ ಯಾವುದೇ ರೀತಿಯ ಸ್ಪಂದನೆ ಅಥವಾ ಪರಿಹಾರ ಕಾರ್ಯ ಕಂಡುಬಂದಿಲ್ಲ.
ಆದರೆ, ಈ ಸಂಕಷ್ಟದ ಸಮಯದಲ್ಲಿ ಎಸ್‌ಡಿಪಿಐ ಸದಸ್ಯರು. ಸ್ಥಳೀಯರ ಪರಿಸ್ಥಿತಿಯನ್ನು ಗಮನಿಸಿದ ಅವರು ತಕ್ಷಣ ಕಾರ್ಯಪ್ರವೃತ್ತರಾದರು. ಮುಳುಗಡೆಗೊಂಡ ಮನೆಗಳನ್ನು ಪರಿವೀಕ್ಷಿಸಿ, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸಹಾಯ ಮಾಡಿದರು. ಈ ಸಹಾಯ ಕಾರ್ಯವು ಕೇವಲ ಸ್ಥಳಾಂತರದಷ್ಟೇ ಸೀಮಿತವಾಗಿರದೆ, ಅವರಿಂದ ಮನೆಗಳನ್ನು ಸ್ವಚ್ಛಗೊಳಿಸುವ ಕಾರ್ಯವೂ ಕೈಗೊಳ್ಳಲಾಯಿತು.
ಮನೆಗಳಿಗೆ ನೀರು ನುಗ್ಗಿದ್ದರಿಂದ ಊಟ ಮಾಡುವ ಸಾದ್ಯತೆ ಇಳಿದುಹೋಗಿತ್ತು. ಈ ಸಂದರ್ಭದಲ್ಲಿ ಎಸ್ ಡಿಪಿಐ ಸದಸ್ಯರು ಆಹಾರ ಮತ್ತು ಅಗತ್ಯವಸ್ತುಗಳನ್ನು ನೀಡುವುದರ ಮೂಲಕ ಜನರಿಗೆ ತುಂಬಾ ನೆರವಾದರು. ಅವರು ತಮ್ಮ ಮನೆಗಳನ್ನು ಪುನಃ ಸುರಕ್ಷಿತವಾಗಿ ವಾಸಿಸಲು ಪ್ರಾರಂಭಿಸಬಹುದಾದ ಸೌಲಭ್ಯವನ್ನು ಒದಗಸಿ ಕೊಟ್ಟರು.