ರಾಜೀನಾಮೆಗೆ ಕಾರ್ಯವೈಖರಿಯೇ ಮಾನದಂಡವಾಗುವುದಾರೆ ಮೊದಲು ಮೋದಿಯನ್ನು ವಜಾಗೊಳಿಸಿ : ರಣದೀಪ್ ಸುರ್ಜೇವಾಲಾ
Prasthutha: July 7, 2021

ಇಂದು ಸಂಜೆ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರಕಾರದ ಸಂಪುಟ ಪುನರ್ ರಚೆನೆಗೆ ಕಸರತ್ತು ನಡೆಯುತ್ತಿದೆ.
ಇದೀಗಾಗಲೇ ಕರ್ನಾಟಕದ ಡಿ ವಿ ಸದಾನಂದ ಗೌಡ ಸೇರಿದಂತೆ ಹಲವು ಹಾಲಿ ಸಚಿವರುಗಳು ರಾಜೀನಾಮೆ ನೀಡಿದ್ದಾರೆ. ಈ ನಡುವೆ ಮೋದಿ ಸಂಪುಟ ಪುನರ್ ರಚನೆಯ ಕಸರತ್ತಿನ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ, “ಸಂಪುಟ ಪುನರ್ ರಚನೆಯ ಹಿನ್ನಲೆಯಲ್ಲಿ ಹಲವರು ರಾಜೀನಾಮೆ ನೀಡಿದ್ದಾರೆ.
ಹಲವು ಹೊಸ ಮುಖಗಳು ಸೇರ್ಪಡೆಯಾಗಲಿದೆ. ಸಚಿವರ ಕಾರ್ಯಕ್ಷಮತೆ ಮತ್ತು ಕಾರ್ಯವೈಖರಿಗಳೇ ಅವರನ್ನು ಕ್ಯಾಬಿನೆಟ್ ನಿಂದ ವಜಾಗೊಳಿಸುವ ಮಾನದಂಡವಾಗುವುದಾದರೆ ಮೊದಲಾಗಿ ನರೇಂದ್ರ ಮೋದಿಯನ್ನು ವಜಾಗೊಳಿಸಬೇಕಾಗಿದೆ” ಎಂದು ಹೇಳಿದ್ದಾರೆ.
ಅವರ ಈ ಹೇಳಿಕೆ ನರೇಂದ್ರ ಮೋದಿ ಸರಕಾರ ಕೋವಿಡ್ ಮೊದಲ ಮತ್ತು ಎರಡನೇ ಅಲೆಯನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದರ ಹಿನ್ನೆಲೆಯಲ್ಲಿ ಹೇಳಿದ್ದಾರೆಂದು ವ್ಯಾಖ್ಯಾನಿಸಲಾಗಿದೆ.
