Home ಟಾಪ್ ಸುದ್ದಿಗಳು ಬ್ರಿಟಿಷರ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿರುವ ಬಿಜೆಪಿ: ರಣದೀಪ್‌ ಸುರ್ಜೇವಾಲಾ

ಬ್ರಿಟಿಷರ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿರುವ ಬಿಜೆಪಿ: ರಣದೀಪ್‌ ಸುರ್ಜೇವಾಲಾ

ದಾವಣಗೆರೆ: ದೇಶವನ್ನು ಕೊಳ್ಳೆ ಹೊಡೆಯಲು ಬ್ರಿಟಿಷರು ಆರಂಭಿಸಿದ್ದ ಈಸ್ಟ್‌ ಇಂಡಿಯಾ ಕಂಪನಿಯು ಅನುಸರಿಸುತ್ತಿದ್ದಒಡೆದು ಆಳುವ ನೀತಿಯನ್ನು ಬಿಜೆಪಿ ಮುಂದುವರಿಸಿದೆ ಎಂದು ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ರಣದೀಪ್‌ ಸಿಂಗ್‌ ಸುರ್ಜೇವಾಲಾ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾತ್ರೆ ಕರ್ನಾಟಕಕ್ಕೆ ಕಾಲಿಟ್ಟು ಏಳು ದಿನಗಳಾಗಿವೆ. ಈ ಅವಧಿಯಲ್ಲಿ ಜಾರಿ ನಿರ್ದೇಶನಾಲಯ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್‌ ಅವರಿಗೆ ಮೂರು ಬಾರಿ ನೋಟಿಸ್ ನೀಡಿದೆ. ಯಾತ್ರೆಗೆ ಬಿಜೆಪಿ ಹೆದರಿರುವುದಕ್ಕೆ ಇದೇ ಸಾಕ್ಷಿ ಎಂದು ಹೇಳಿದರು.

ಭಾರತ್ ಜೋಡೊ ಯಾತ್ರೆ ಪೂರ್ಣಗೊಂಡ ಬಳಿಕ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದಿಂದ ಯಾತ್ರೆ ಮಾಡಿ ಜನರನ್ನು ಒಗ್ಗೂಡಿಸುವ, ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

 ಬಡವರ ದುಡ್ಡನ್ನು ದೋಚಿ ಶ್ರೀಮಂತರಿಗೆ ಹಂಚುವುದೇ ಬಿಜೆಪಿಯ ಹೊಸ ಆರ್ಥಿಕ ನೀತಿ ಯಾಗಿದೆ. ಒಡೆದು ಆಳುವುದೇ ಬಿಜೆಪಿಯ ನೀತಿಯಾಗಿದ್ದು, ಮುಸ್ಲಿಮರು ಇರುವಲ್ಲಿ ಹಿಂದೂ– ಮುಸ್ಲಿಂ ಎಂದು ಒಡೆಯುಲಾಗುತ್ತಿದೆ. ಮುಸ್ಲಿಮರು ಇಲ್ಲದ ಕಡೆಗಳಲ್ಲಿ ಜಾತಿಗಳ ನಡುವೆ ಒಡಕು ಸೃಷ್ಟಿಸುವ ಮೂಲಕ ದ್ವೇಷ ಹರಡಲಾಗುತ್ತದೆ ಎಂದು ಟೀಕಿಸಿದರು.

Join Whatsapp
Exit mobile version