Home ಟಾಪ್ ಸುದ್ದಿಗಳು ಡಿ.ಕೆ. ಶಿವಕುಮಾರ್ ಮನೆಯಲ್ಲಿಯೇ ED, CBI ಕಚೇರಿ ಓಪನ್ ಮಾಡಿ: ರಣದೀಪ್ ಸಿಂಗ್ ಸುರ್ಜೇವಾಲಾ ವ್ಯಂಗ್ಯ

ಡಿ.ಕೆ. ಶಿವಕುಮಾರ್ ಮನೆಯಲ್ಲಿಯೇ ED, CBI ಕಚೇರಿ ಓಪನ್ ಮಾಡಿ: ರಣದೀಪ್ ಸಿಂಗ್ ಸುರ್ಜೇವಾಲಾ ವ್ಯಂಗ್ಯ

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮನೆ ಮೇಲೆ ಎಷ್ಟು ಬಾರಿ ರೇಡ್ ಮಾಡುತ್ತೀರಿ. ಇವರ ಮನೆಯಲ್ಲಿಯೇ ಇಡಿ, ಸಿಬಿಐ ಕಚೇರಿ ತೆರೆದುಬಿಡಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಮನೆಯ ಮೇಲೆ ಒಂದು ಡಜನ್ ಬಾರಿ ದಾಳಿ ಮಾಡಿದ್ದರೂ ನಿಮಗೆ ಏನೂ ಸಿಕ್ಕಿಲ್ಲ. ಕಾಂಗ್ರೆಸ್ ಪಕ್ಷ ಯಾವುದಕ್ಕೂ ಹೆದರಲ್ಲ. ಕಾಂಗ್ರೆಸ್ ಪಕ್ಷ, ಕಾರ್ಯಕರ್ತರು ಡಿಕೆಶಿ ಜೊತೆಗೆ ಇದ್ದಾರೆ ಎಂದು ಹೇಳಿದರು.

ಬೊಮ್ಮಾಯಿ ಸರ್ಕಾರ ಅನೈತಿಕ ಮಾರ್ಗದಿಂದ ಬಂದಿರುವ ಸರ್ಕಾರವಾಗಿದೆ. ಬಿಜೆಪಿಯವರು ಜನರ ದೃಷ್ಟಿಯಲ್ಲಿ ನೆಲಕ್ಕೆ ಬಿದ್ದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಒಂದು ದಿನವೂ ಇರಲು ಸರ್ಕಾರಕ್ಕೆ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

Join Whatsapp
Exit mobile version