Home ಟಾಪ್ ಸುದ್ದಿಗಳು ಭಾರತ್‌ ಜೋಡೊ ಯಾತ್ರೆಯಲ್ಲಿ ರಮ್ಯಾ ಪ್ರತ್ಯಕ್ಷ: ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ನಟಿ

ಭಾರತ್‌ ಜೋಡೊ ಯಾತ್ರೆಯಲ್ಲಿ ರಮ್ಯಾ ಪ್ರತ್ಯಕ್ಷ: ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ನಟಿ

ರಾಯಚೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯು ಕರ್ನಾಟಕದಲ್ಲಿ ಸಾಗುತ್ತಿದ್ದು, ರಾಹುಲ್ ಜೊತೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಹೆಜ್ಜೆ ಹಾಕಿದ್ದಾರೆ.

ಕರ್ನಾಟಕದ ರಾಯಚೂರಿನಲ್ಲಿ ಭಾರತ್‌ ಜೋಡೋ ಯಾತ್ರೆಗೆ ನಟಿ ರಮ್ಯಾ ಕೂಡ ಕೈಜೋಡಿಸುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ರಮ್ಯಾ ಕೈ ಹಿಡಿದು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದು, ಡಿಕೆಶಿ, ಸಿದ್ಧರಾಮಯ್ಯ, ಎಂಬಿ ಪಾಟೀಲ್ ರಂತಹ ಅನೇಕ ಕಾಂಗ್ರೆಸ್ ನಾಯಕರು ಈ ಸಂದರ್ಭದಲ್ಲಿ ಜೊತೆಗಿದ್ದರು.

ನಟಿ ಇತ್ತೀಚೆಗೆ ಕಾಂಗ್ರೆಸ್‌ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರಲಿಲ್ಲ. ಪಕ್ಷದ ಕೆಲವು ಮುಖಂಡರ ಜೊತೆ ಅಸಮಾಧಾನ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಇದೀಗ ಭಾರತ್ ಜೋಡೋ ಪಾದಯಾತ್ರೆಯ ಕೊನೆಯ ಹಂತದಲ್ಲಿ ರಮ್ಯಾ ಭಾಗಿಯಾಗಿದ್ದಾರೆ. ಪಾದಯಾತ್ರೆಗೆ ಆಗಮಿಸಿದ ರಮ್ಯಾಗೆ ಡಿ.ಕೆ.ಶಿವಕುಮಾರ್ ತಮಾಷೆಯಲ್ಲಿ ಕೆನ್ನೆಗೆ ಏಟು ಕೊಟ್ಟು ಅಪ್ಪಿಕೊಂಡ ಪ್ರಸಂಗವೂ ನಡೆಯಿತು.

Join Whatsapp
Exit mobile version