ತೀರ್ಥಹಳ್ಳಿ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಸ್ಥಳೀಯ ಬಿಜೆಪಿ ಮುಖಂಡನ ವಿಚಾರಣೆ ನಡೆಸಿದೆ.
ಈ ಹಿಂದೆ ಮೊಬೈಲ್ ಅಂಗಡಿಯ ಇಬ್ಬರು ಯುವಕರನ್ನು ವಿಚಾರಣೆಗೆ ಒಳಪಡಿಸಿದ್ದ ಎನ್ ಐಎ ತಂಡ ಈ ಹುಡುಗರ ಜೊತೆ ಬಿಜೆಪಿ ನಗರ ಘಟಕದ ಮುಖಂಡನಿಗೆ ಸಂಪರ್ಕ ಇದ್ದ ಕಾರಣ ಆತನನ್ನು ವಿಚಾರಣೆಗೆ ಒಳಪಡಿಸಿರಬಹುದು ಎನ್ನಲಾಗಿದೆ.