Home ಟಾಪ್ ಸುದ್ದಿಗಳು “ಸಿಡಿಯಲ್ಲಿರೋದು ನಾನೇ”: ತನಿಖಾಧಿಕಾರಿ ಮುಂದೆ ತಪ್ಪೊಪ್ಪಿಕೊಂಡರಾ ರಮೇಶ್ ಜಾರಕಿಹೊಳಿ..!?

“ಸಿಡಿಯಲ್ಲಿರೋದು ನಾನೇ”: ತನಿಖಾಧಿಕಾರಿ ಮುಂದೆ ತಪ್ಪೊಪ್ಪಿಕೊಂಡರಾ ರಮೇಶ್ ಜಾರಕಿಹೊಳಿ..!?

ಬೆಂಗಳೂರು: ಕಾಮಕೇಳಿ ಸಿಡಿಯಲ್ಲಿ ಇರುವುದು ತಾನೇ ಅಂತಾ ಮಾಜಿ ಸಚಿವ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಒಪ್ಪಿಕೊಂಡಿದ್ದಾಗಿ ತಿಳಿದು ಬಂದಿದೆ. ಅಲ್ಲದೇ, ಯುವತಿ ನನ್ನ ಪರಿಚಯಸ್ಥೆ ಆಗಿದ್ದು ಇದೊಂದು ಸಹಮತದೊಂದಿಗೆ ನಡೆದ ಲೈಂಗಿಕ ಸಂಪರ್ಕ ಆಗಿತ್ತು. ಆದರೆ ಇದು ಹೇಗೆ ರೆಕಾರ್ಡ್ ಆಗಿದೆ ಅನ್ನೋದು ತಿಳಿದಿಲ್ಲ ಅನ್ನೋದಾಗಿ ಒಪ್ಪಿಕೊಂಡಿದ್ದಾರೆ.


ಪ್ರಾಜೆಕ್ಟ್ ಒಂದಕ್ಕಾಗಿ ನನ್ನ ಬಳಿಗೆ ಬಂದಿದ್ದ ಆಕೆ, ನನ್ನ ಜೊತೆ ಆತ್ಮೀಯವಾಗಿಯೇ ಇದ್ದಳು. ಆಕೆಯ ಪ್ರಾಜೆಕ್ಟ್ ಕಂಪ್ಲೀಟ್ ಮಾಡಲು ನಾನು ಸಹಕಾರ ನೀಡಲು ಒಪ್ಪಿದ್ದೆ ಎಂದಿದ್ದಾರೆ. ಈ ಹಿಂದೆ ಸಿಡಿ ಸಂಬಂಧ ಅದೊಂದು ನಕಲಿ ಸಿಡಿ ಎನ್ನುತ್ತಿದ್ದ ಜಾರಕಿಹೊಳಿ ಇದೀಗ ತಾನೇ ಸಿಡಿಯ ಅಸಲಿಯತ್ತು ಬಿಚ್ಚಿಟ್ಟಿದ್ದಾರೆ. ಹೀಗಂತ ಶಾಸಕ ರಮೇಶ್ ಜಾರಕಿಹೊಳಿ ತನಿಖಾಧಿಕಾರಿಗಳ ಮುಂದೆ ಸತ್ಯಾಂಶ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ.


ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ತನಿಖಾ ತಂಡ ಇದೊಂದು ಹನಿಟ್ರ್ಯಾಪ್ ಇರಬಹುದೇ ಅನ್ನೋದರ ಕುರಿತಾಗಿಯೂ ತನಿಖೆ ನಡೆಸುತ್ತಿದೆ. ಇನ್ನೊಂದೆಡೆ ಸಂತ್ರಸ್ತೆ ಲೈಂಗಿಕ ದೌರ್ಜನ್ಯ ದೂರನ್ನ ನೀಡಿದ್ದು ಆ ಆಯಾಮದಲ್ಲಿಯೂ ರಮೇಶ್ ಜಾರಕಿಹೊಳಿ ವಿಚಾರಣೆ ನಡೆಯುತ್ತಿದೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಬಿಜೆಪಿ-ಕಾಂಗ್ರೆಸ್ ನಡುವಿನ ರಾಜಕೀಯ ಜಂಗೀಕುಸ್ತಿಗೂ ವೇದಿಕೆಯಾಗಿತ್ತು. ಇದರಿಂದಾಗಿ ಅನಿವಾರ್ಯವಾಗಿ ಜಾರಕಿಹೊಳಿ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Join Whatsapp
Exit mobile version