Home ಟಾಪ್ ಸುದ್ದಿಗಳು ಮಹಿಳಾ ರಂಗದ ಸಬಲೀಕರಣ ನಮ್ಮ ಗುರಿಯಾಗಬೇಕು: ರಮಾನಾಥ್ ಕೋವಿಂದ್‌

ಮಹಿಳಾ ರಂಗದ ಸಬಲೀಕರಣ ನಮ್ಮ ಗುರಿಯಾಗಬೇಕು: ರಮಾನಾಥ್ ಕೋವಿಂದ್‌

ಹೊಸದಿಲ್ಲಿ: ‘ಒಂದು ದೇಶವಾಗಿ ಮಹಿಳೆಯರ ಅಭಿವೃದ್ಧಿಗಿಂತ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಆದ್ಯತೆ ನೀಡುವುದು ಗುರಿಯಾಗಬೇಕು’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಎನ್‌ಎಎಲ್‌ಎಸ್‌ಎ) ಏರ್ಪಡಿಸಿದ್ದ ಆರು ವಾರಗಳ ಅವಧಿಯ ‘ಭಾರತದಲ್ಲಿ ಕಾನೂನು ಅರಿವು ಅಭಿಯಾನ’ ಉದ್ಘಾಟಿಸಿ ಅವರು ಮಾತನಾಡಿದ ಅವರು ಕಾನೂನು ಸೇವೆಗಳ ಪ್ರಾಧಿಕಾರವು ಸಮಾಜದ ತಳ ಸಮುದಾಯಕ್ಕೆ ನೆರವು ನೀಡಲು ವಿಶೇಷ ಪ್ರಯತ್ನಗಳನ್ನು ಮಾಡಬೇಕು ಎಂದು ಹೇಳಿದರು.

‘ಒಂದು ದೇಶವಾಗಿ ಮಹಿಳೆಯರ ಅಭಿವೃದ್ಧಿಯಿಂದ ಮಹಿಳಾ ಅಭಿವೃದ್ಧಿಗೆ ಆದ್ಯತೆ ನೀಡುವುದು ನಮ್ಮ ಗುರಿಯಾಗಬೇಕು. ಆದ್ದರಿಂದ ಕಾನೂನು ಸೇವಾ ಸಂಸ್ಥೆಗಳಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸಬೇಕಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಮಹಿಳಾ ಫಲಾನುಭವಿಗಳನ್ನು ತಲುಪುವುದು ಸಾಧ್ಯವಾಗಲಿದೆ’ ಎಂದು ಕೋವಿಂದ್‌ ಹೇಳಿದರು.

ಈ ವೇಳೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ, ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಉಪಸ್ಥಿತರಿದ್ದರು.

Join Whatsapp
Exit mobile version